Home ಟಾಪ್ ಸುದ್ದಿಗಳು ನನಗೆ ಮಾಡಿದಂತೆ ಮುಂಬೈಗೆ ದ್ರೋಹ ಬಗೆಯಬೇಡಿ: ಉದ್ಧವ್ ಠಾಕ್ರೆ

ನನಗೆ ಮಾಡಿದಂತೆ ಮುಂಬೈಗೆ ದ್ರೋಹ ಬಗೆಯಬೇಡಿ: ಉದ್ಧವ್ ಠಾಕ್ರೆ

ಮುಂಬೈ: ನನಗೆ ದ್ರೋಹ ಎಸಗಿದಂತೆ ನೀವು ಮುಂಬೈಗೆ ದ್ರೋಹ ಎಸಗಬೇಡಿ ಎಂದು ಶಿವಸೇನಾ ನಾಯಕ ಉದ್ಧವ್ ಠಾಕ್ರೆ ಮೆಟ್ರೋ ಕಾರ್ ಶೆಡ್ ಕುರಿತು ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆಯನ್ನು ಕೇಳಿಕೊಂಡಿದ್ದಾರೆ.

ಶಿವಸೇನೆ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೆಟ್ರೋ ಕಾರ್ ಶೆಡ್ ಅನ್ನು ಆರೆ ಕಾಲೋನಿಗೆ ಸ್ಥಳಾಂತರಿಸುವ ನೂತನ ಮಹಾರಾಷ್ಟ್ರ ಸರ್ಕಾರದ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.  ಈ ಕುರಿತು  ಕಾರ್ ಶೆಡ್ ಅನ್ನು ಆರೆ ಕಾಲೋನಿಗೆ ಸ್ಥಳಾಂತರಿಸಬೇಡಿ, ಇದರಿಂದ ಪರಿಸರಕ್ಕೆ ಹಾನಿಯಾಗಲಿದೆ. ಇದು ನನ್ನ ಮನವಿ ಎಂದು ತಿಳಿಸಿದ್ದಾರೆ.

2019 ರಲ್ಲಿ ಈ ಮೆಟ್ರೋ ರೈಲು ಯೋಜನೆ ಮುಂಬೈನಲ್ಲಿ ಪರಿಸರ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆಯನ್ನು ಹುಟ್ಟುಹಾಕಿತ್ತು. ಮುಂಬೈನ ಹಸಿರು ಶ್ವಾಸಕೋಶ ಎಂದು ಕರೆಯಲ್ಪಡುವ ಆರೆ ಕಾಲೋನಿಯಲ್ಲಿ ಮರಗಳನ್ನು ಕಡಿಯಲು ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ (ಬಿಎಂಸಿ)ಗೆ ಮುಂಬೈ ಮೆಟ್ರೋ ರೈಲು ಕಾರ್ಪೊರೇಶನ್ ಅನುಮತಿ ಕೋರಿದ್ದರಿಂದ  ಮುಂಬೈನಲ್ಲಿ ಭಾರೀ ಪ್ರತಿಭಟನೆಗಳು ನಡೆದಿದ್ದವು.

ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳ ನಂತರ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮುಂಬೈನ ವಿವಾದಿತ ಮೆಟ್ರೋ ಕಾರ್ ಶೆಡ್ ಯೋಜನೆಗೆ ಸಂಬಂಧಿಸಿದಂತೆ ಉದ್ದವ್ ಠಾಕ್ರೆ ಸರ್ಕಾರದ ನಿರ್ಣಯವನ್ನು ಬದಲಾಯಿಸಲು ಹೊರಟಿದ್ದಾರೆ.

Join Whatsapp
Exit mobile version