Home ಕರಾವಳಿ ಕ್ರೀಡೆಯ ಜೊತೆಗೆ ಸಾಮಾಜಿಕ ಸೇವೆಗಳನ್ನು ಮಾಡುತ್ತಿರುವ ಕೊಕ್ಕೋಟ್ಟು ಯುವಕರ ಕಾರ್ಯ ಶ್ಲಾಘನೀಯ: ರಿಯಾಝ್ ಫರಂಗಿಪೇಟೆ

ಕ್ರೀಡೆಯ ಜೊತೆಗೆ ಸಾಮಾಜಿಕ ಸೇವೆಗಳನ್ನು ಮಾಡುತ್ತಿರುವ ಕೊಕ್ಕೋಟ್ಟು ಯುವಕರ ಕಾರ್ಯ ಶ್ಲಾಘನೀಯ: ರಿಯಾಝ್ ಫರಂಗಿಪೇಟೆ

ಉಳ್ಳಾಲ: SDPI ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಬೋಳಿಯಾರ್ ಗ್ರಾಮದ ಫ್ರೆಂಡ್ಸ್ ಕ್ರಿಕೆಟರ್ಸ್ ಆಯೋಜಿಸಿದ್ದ ಕೊಕ್ಕೋಟ್ಟು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಆಟಗಾರರನ್ನು ಮತ್ತು ಕ್ರೀಡಾಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ರಿಯಾಝ್ ಫರಂಗಿಪೇಟೆ, ಈ ಪರಿಸರದ ಯುವಕರು ಕೊರೋನಾ ಸಂದರ್ಭದಲ್ಲಿ ನೀಡಿದ ಮಾನವೀಯ ಸೇವೆಗಳು ಮತ್ತು ಅದೇ ರೀತಿ ರಕ್ತದಾನದಲ್ಲೂ ಕೂಡ ಮುಂಚೂಣಿಯಲ್ಲಿರುವುದು ಶ್ಲಾಘನೀಯ ಎಂದು ಹೇಳಿದರು
ಸಮಾಜಮುಖಿ ಕಾರ್ಯಗಳನ್ನು ಯಾರು ನಡೆಸುತ್ತಾರೋ, ಮಾನವೀಯ ಮೌಲ್ಯಗಳನ್ನು ಯಾರು ಎತ್ತಿ ಹಿಡಿಯುತ್ತಾರೋ ಅವರೊಂದಿಗೆ SDPI ಪಕ್ಷವು ಸದಾ ನಿಲ್ಲುತ್ತದೆ ಎಂಬುವುದನ್ನು ಕೂಡ ಈ ಸಂದರ್ಭದಲ್ಲಿ ಹೇಳಿದರು.
ಕಾರ್ಯಕ್ರಮದಲ್ಲಿ ಬೋಳಿಯಾರ್ ಗ್ರಾಮ ಪಂಚಾಯತ್ SDPI ಸದಸ್ಯರಾದ ಹನೀಫ್ ರಂತಡ್ಕ, ಯೂತ್ ಕಾಂಗ್ರೆಸ್ ಅಧ್ಯಕ್ಷ ಕಬೀರ್, ಕಾಂಗ್ರೆಸ್ ಮುಖಂಡ ಉಮರ್, ಅಶ್ರಫ್, ಅಝೀಝ್ ಉಪಸ್ಥಿತರಿದ್ದರು

Join Whatsapp
Exit mobile version