ನಾಯಿ ಕಟ್ಟಿಹಾಕಿ ಥಳಿತ: ದೂರು ದಾಖಲು

ಬೆಂಗಳೂರು: ಯುವಕರಿಬ್ಬರು ನಾಯಿಯನ್ನು ಹಗ್ಗದದಿಂದ ಕಟ್ಟಿ ಮನಸ್ಸೊ ಇಚ್ಚೆ ಥಳಿಸಿ, ವಿಕೃತಿ ಮೆರೆದಿರುವ ಘಟನೆ ಕೆ.ಆರ್‌.ಪುರಂನ‌  ಭಟ್ಟರಹಳ್ಳಿಯಲ್ಲಿ ನಡೆದಿದೆ‌.

ಭಟ್ಟರಹಳ್ಳಿಯ ಮಂಜುನಾಥ್ ಲೇಔಟ್​ ನಲ್ಲಿ ಮನೆಯಲ್ಲಿದ್ದ ತಮ್ಮ ನಾಯಿಗೆ ಪಕ್ಕದ ಮನೆಯ ನಾಯಿ ಕಚ್ಚಿದೆ ಎಂದು ಕನಿಕರವಿಲ್ಲದೇ ಥಳಿಸಿದ್ದಾರೆ.

- Advertisement -

ಹಗ್ಗ ಕಟ್ಟಿ ಶ್ವಾನದ ಮೇಲೆ ಹಲ್ಲೆ ನಡೆಸಿದ ಸಹೋದರರು ನಾಯಿಯನ್ನು ಕಟ್ಟಿಹಾಕಿ ದೊಣ್ಣೆಗಳಿಂದ ಹಲ್ಲೆ ಮಾಡಿ ವಿಡಿಯೋ ಕೂಡ ಮಾಡಿಕೊಂಡಿದ್ದಾರೆ.

ಗದ್ದುಗೆಪ್ಪ ಎಂಬುವರು ಸಾಕಿಕೊಂಡಿದ್ದ ನಾಯಿ ಮೇಲೆ ಹಲ್ಲೆ ಮಾಡಿ ಸಹೋದರರು ವಿಕೃತಿ ಮೆರೆದಿದ್ದಾರೆ. ಲೋಹಿತ್ ಕುಮಾರ್ ಹಾಗೂ ಅವನ ಸಹೋದರಿಂದ ನಾಯಿ ಹಲ್ಲೆ ನಡೆದಿದ್ದು, ಗದ್ದಿಗೆಪ್ಪ ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -