Home ಟಾಪ್ ಸುದ್ದಿಗಳು ಹೆಣ ಕಂಡರೆ ಓಡೋಡಿ ಬರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ರಾಜ್ಯದ ರೈತರ ಸಮಸ್ಯೆ ಕಾಣುತ್ತಿಲ್ಲವೇ:...

ಹೆಣ ಕಂಡರೆ ಓಡೋಡಿ ಬರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ರಾಜ್ಯದ ರೈತರ ಸಮಸ್ಯೆ ಕಾಣುತ್ತಿಲ್ಲವೇ: ಕಾಂಗ್ರೆಸ್

ಬೆಂಗಳೂರು: ಹೆಣ ಕಂಡರೆ ಓಡೋಡಿ ಬರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯದ ರೈತರ ಸಮಸ್ಯೆಗಳಿಗೆ ಬಾಯಿಬಿಡದಿರುವುದೇಕೆ ಎಂದು ಕರ್ನಾಟಕ ಕಾಂಗ್ರೆಸ್ ಪ್ರಶ್ನಿಸಿದೆ.

ರೈತರಿಗೂ ಬಡ್ಡಿ ಬರೆ ಎಂಬ ಪತ್ರಿಕೆಯೊಂದರ ಸುದ್ದಿಯನ್ನು ಲಗತ್ತಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ರೈತ ವಿರೋಧಿ ಬಿಜೆಪಿ ಸರ್ಕಾರ, ರೈತರಿಂದ ಮೇಲಿಂದ ಮೇಲೆ ಅನ್ಯಾಯವೆಸಗುತ್ತಿದೆ. ನೆರ ಪರಿಹಾರವಿಲ್ಲ, ಗೊಬ್ಬರವೂ ಸಿಗುತ್ತಿಲ್ಲ. ಬೆಳೆ ಸಾಲಕ್ಕೂ ಪರದಾಟ, ಸಾಲದ ಮೇಲಿನ ಬಡ್ಡಿಯೂ ದುಬಾರಿ. ಬಿಜೆಪಿಗೆ ರೈತರ ಮೇಲಿರುವುದು ದ್ವೇಷವೇ , ತಾತ್ಸಾರವೇ? ಎಂದು ಕಾಂಗ್ರೆಸ್ ಪಶ್ನಿಸಿದೆ.

ವಿಜಯಪುರ ಜಿಲ್ಲೆ ಅತಿವೃಷ್ಟಿಗೆ ತತ್ತರಿಸಿದೆ. ಅಪಾರ ಬೆಳೆ ನಷ್ಟವಾಗಿದೆ. ಜನತೆ ಕಂಗಾಲಾಗಿದ್ದಾರೆ. ರಾಜ್ಯ ಸರ್ಕಾರದ ಪರಿಹಾರದ ಪಟ್ಟಿಯಲ್ಲಿ ಬಿಡಿಗಾಸಿನ ನೆರವೂ ಜಿಲ್ಲೆಗಿಲ್ಲ. ಇದರ ಬಗ್ಗೆ ತಲೆಕೆಡಿಸಿಕೊಳ್ಳದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರೇ, ಜನರನ್ನು ನೆರೆಯಲ್ಲಿ ಮುಳುಗಿಸಿ ಮೆರವಣಿಗೆ ಹೊರಟಿದ್ದು, ಸಂತೋಷಕ್ಕೆ ಎಂದು ಕಾಂಗ್ರೆಸ್ ಕುಟುಕಿದೆ.

Join Whatsapp
Exit mobile version