ಸುಪ್ರೀಂ ಕೋರ್ಟ್‌ಗೆ ತಿಳಿಸಿದ ವೈದ್ಯಕೀಯ ಪ್ರತಿನಿಧಿಗಳ ಸಂಸ್ಥೆ
ನವದೆಹಲಿ: ‘ಡೋಲೋ-650’ ಟ್ಯಾಬ್ಲೆಟ್ ತಯಾರಕರು ಟ್ಯಾಬ್ಲೆಟ್ ಅನ್ನು ಶಿಫಾರಸು ಮಾಡಲು ವೈದ್ಯರಿಗೆ 1,000 ಕೋಟಿ ರೂ. ಮೌಲ್ಯದ ಉಚಿತ ಕೊಡುಗೆಗಳನ್ನು ವಿತರಿಸಿದ್ದಾರೆ ಎಂದು ನೇರ ತೆರಿಗೆಗಳ ಕೇಂದ್ರ ಮಂಡಳಿಯು ಆರೋಪಿಸಿದೆ ಎಂದು ವೈದ್ಯಕೀಯ ಪ್ರತಿನಿಧಿಗಳ ಸಂಸ್ಥೆಯೊಂದು ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಫೆಡರೇಶನ್ ಆಫ್ ಮೆಡಿಕಲ್ ಆಂಡ್ ಸೇಲ್ಸ್ ರೆಪ್ರೆಸೆಂಟೇಟಿವ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಸಂಜಯ್ ಪಾರಿಕ್, DOLO ತನ್ನ ಜ್ವರ-ನಿರೋಧಕ ಔಷಧವನ್ನು ರೋಗಿಗಳಿಗೆ ಶಿಫಾರಸು ಮಾಡಲೆಂದು, ವೈದ್ಯರಿಗೆ ಗಿಫ್ಟ್ ನೀಡುವ ಸಲುವಾಗಿ 1,000 ಕೋಟಿ ರೂ ಹೂಡಿಕೆ ಮಾಡಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದಾರೆ.
ಜಸ್ಟೀಸ್ ಎ.ಎಸ್ ಬೋಪಣ್ಣ ಅವರನ್ನೊಳಗೊಂಡ ಜಸ್ಟೀಸ್ ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠವು, ಇದು ಗಂಭೀರ ಪ್ರಕರಣವಾಗಿದ್ದು, ಕೋವಿಡ್ ಸಂದರ್ಭದಲ್ಲೂ ಇದೇ ರೀತಿ ಸೂಚಿಸಲಾಗಿದೆ ಎಂದಿದೆ.
ನನಗೆ ಕೋವಿಡ್ ಬಂದ ಸಂದರ್ಭದಲ್ಲೂ ಇದೇ ಅನುಭವವಾಗಿದೆ. ಇದೊಂದು ಗಂಭೀರ ಪ್ರಕರಣವಾಗಿದೆ ಎಂದು ಜ. ಡಿ.ವೈ ಚಂದ್ರಚೂಡ್ ಹೇಳಿದರು.
ಈ ವಿಚಾರವಾಗಿ, ಕೇಂದ್ರ ಸರಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಅವರಿಗೆ 10 ದಿನಗಳೊಳಗೆ ಉತ್ತರ ನೀಡುವಂತೆ ನ್ಯಾಯಾಲಯ ಸೂಚಿಸಿದೆ.