ಗರ್ಭಾಶಯ ಶಸ್ತ್ರಚಿಕಿತ್ಸೆಗೆ ಬಂದ ಮಹಿಳೆಯ ಮೂತ್ರಪಿಂಡ ಕದ್ದ ವೈದ್ಯರು

Prasthutha|

ಪಾಟ್ನಾ: ಶಸ್ತ್ರಚಿಕಿತ್ಸೆಗೆಂದು ಬಂದಿದ್ದ ರೋಗಿಯ ಮೂತ್ರಪಿಂಡಗಳನ್ನು ತೆಗೆದ ಘಟನೆ ಬಿಹಾರದ ಮುಜಾಫರ್ ಪುರದಲ್ಲಿ ನಡೆದಿದೆ.

- Advertisement -


ಬರಿಯಾರ್ಪುರ ಪ್ರದೇಶದಲ್ಲಿ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ನರ್ಸಿಂಗ್ ಹೋಂನಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ನರ್ಸಿಂಗ್ ಹೋಂ ಮಾಲೀಕರು ಮತ್ತು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ಶೀಘ್ರದಲ್ಲೇ ಅವರನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.


ಮಹಿಳೆಯೊಬ್ಬರು ಕಳೆದ ವರ್ಷ ಸೆಪ್ಟೆಂಬರ್ 3 ರಂದು ಗರ್ಭಾಶಯವನ್ನು ತೆಗೆದುಹಾಕುವ ಶಸ್ತ್ರಚಿಕಿತ್ಸೆಗಾಗಿ ಕ್ಲಿನಿಕ್ ಗೆ ಬಂದಿದ್ದರು. ಶಸ್ತ್ರಚಿಕಿತ್ಸೆಯ ನಂತರ ಮಹಿಳೆ ತೀವ್ರ ಹೊಟ್ಟೆ ನೋವು ಅನುಭವಿಸುತ್ತಿದ್ದು, ನೋವು ಅಸಹನೀಯವಾಗುತ್ತಿದ್ದಂತೆ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇಲ್ಲಿ ನಡೆಸಿದ ಪರೀಕ್ಷೆಯಲ್ಲಿ, ಮಹಿಳೆಯ ಮೂತ್ರಪಿಂಡಗಳನ್ನು ತೆಗೆಯಲ್ಪಟ್ಟಿರುವುದು ಕಂಡುಬಂದಿದೆ.

- Advertisement -


ಮಹಿಳೆಯು ಸೆಪ್ಟೆಂಬರ್ 15 ರಿಂದ ಪಾಟ್ನಾದ ಇಂದಿರಾ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ಡಯಾಲಿಸಿಸ್ ಗೆ ಒಳಗಾಗಿದ್ದಾರೆ. ಮಹಿಳೆಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.

Join Whatsapp