Home ಟಾಪ್ ಸುದ್ದಿಗಳು ಕೇಂದ್ರ ಗಾಝಾದ ಆಸ್ಪತ್ರೆ ತೊರೆದ ವೈದ್ಯರು, ರೋಗಿಗಳು

ಕೇಂದ್ರ ಗಾಝಾದ ಆಸ್ಪತ್ರೆ ತೊರೆದ ವೈದ್ಯರು, ರೋಗಿಗಳು

Smoke rises as a tower building collapses after it was hit by Israeli air strikes amid a flare-up of Israeli-Palestinian violence, in Gaza City May 12, 2021. REUTERS/Ibraheem Abu Mustafa - UP1EH5C1ALIK1

ಗಾಝಾಪಟ್ಟಿ: ಇಸ್ರೇಲ್‌ ಸೈನಿಕರ ದಾಳಿ ಕೇಂದ್ರ ಗಾಝಾದ ಪ್ರಮುಖ ಆಸ್ಪತ್ರೆ ಅಲ್‌ -ಅಖ್ಸಾ ಮಾರ್ಟಿಯರ್ಸ್‌ ಅನ್ನು ಸಮೀಪಿಸಿದ ಕಾರಣ ವೈದ್ಯರು, ರೋಗಿಗಳು ಮತ್ತು ಸ್ಥಳಾಂತರಗೊಂಡ ನಾಗರಿಕರು ಆಸ್ಪತ್ರೆ ತೊರೆಯುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ದೇರ್ ಅಲ್-ಬಾಲಾಹ್‌ನಲ್ಲಿರುವ ಅಲ್-ಅಖ್ಸಾ ಮಾರ್ಟಿಯರ್ಸ್‌ ಆಸ್ಪತ್ರೆಯನ್ನು ಸೇವಾ ಏಜೆನ್ಸಿಗಳು ಮತ್ತು ವೈದ್ಯರು ತೊರೆದಿದ್ದು, ಮೂರು ತಿಂಗಳ ಯುದ್ಧದಿಂದ ಛಿದ್ರಗೊಂಡ ಆರೋಗ್ಯ ವ್ಯವಸ್ಥೆಗೆ ಮತ್ತೊಂದು ದೊಡ್ಡ ಹೊಡೆತ ಬಿದ್ದಂತಾಗಿದೆ. ಈ ಆಸ್ಪತ್ರೆಯಲ್ಲಿ ಆಶ್ರಯ ಪಡೆದಿದ್ದವರು ಆಸ್ಪತ್ರೆ ತೊರೆದು ಹೋಗಿದ್ದಾರೆ.

ಆಸ್ಪತ್ರೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹಲವಾರು ಬಾರಿ ಸೌಲಭ್ಯಗಳು ಅಸ್ತವ್ಯಸ್ತಗೊಂಡಿವೆ. ಸೇವಾ ಏಜೆನ್ಸಿಗಳು ಹೊರನಡೆದ ನಂತರ ಸಾವಿರಾರು ಜನರು ಆಸ್ಪತ್ರೆಯಿಂದ ನಿರ್ಗಮಿಸಿದ್ದಾರೆ. ಎಲ್ಲಿಯೂ ಹೋಗಲಾಗದ ಸ್ಥಿತಿಯಲ್ಲಿರುವ ರೋಗಿಗಳನ್ನು ಒಂದೇ ಮಹಡಿಯಲ್ಲಿ ಇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಲ್-ಅಖ್ಸಾ ಮಾರ್ಟಿಯರ್ಸ್‌ ಆಸ್ಪತ್ರೆಯ ಉದ್ಯೋಗಿ ಉಮರ್ ಅಲ್-ದರಾವಿ ಹೇಳಿದ್ದಾರೆ ಎಂದು ವರದಿಯಾಗಿದೆ.

Join Whatsapp
Exit mobile version