ಮಂಗಳೂರು: ಅಭಿವೃದ್ಧಿ, ಶಾಂತಿ ನೆಮ್ಮದಿ ಬೇಕಾ ಅಥವಾ ಧರ್ಮ, ಜಾತಿ, ಸ್ವಾರ್ಥ ಪ್ರಚೋದನಾಕಾರಿ ಮಾತುಗಳು ಬೇಕಾ ಎಂದು ಮಂಗಳೂರಿಗರನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೇಳಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು, ಇಲ್ಲಿ ನಾವು ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಆಗಲಿಲ್ಲ. ಇದನ್ನ ಒಪ್ಪಿಕೊಳ್ಳುತ್ತೇವೆ. ಆದರೆ ನಮ್ಮ ಪ್ರಯತ್ನವನ್ನು ನಾವು ಮಾಡುತ್ತೇವೆ ಎಂದರು.
ಜನರ ಮುಂದೆ ಕೊಟ್ಟಿರುವ ಮಾತು ಉಳಿಸಿಕೊಂಡಿರುವ ಸರ್ಕಾರ ನಮ್ಮದು. ಒಳ್ಳೆಯ ಕೆಲಸ ಮಾಡಲು ಮುಖ್ಯಮಂತ್ರಿಗಳು ಮುಂದೆ ಹೆಜ್ಜೆ ಇಡುತ್ತಿದ್ದಾರೆ. ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ಪ್ರತಿಪಾಧನೆ ಮಾಡುತ್ತಿದ್ದಾರೆ. ಜನರ ವಿಶ್ವಾಸ ಗಳಿಸಲು ನಮ್ಮ ಪ್ರಾಮಾಣಿಕ ಪ್ರಯತ್ನ ಇರುತ್ತದೆ. ಕೊಡಗಿನಲ್ಲಿ ನಾವು ಗೆದ್ದೆ ಇಲ್ಲ ಗೆದ್ದೆ ಇಲ್ಲ ಅಂತಿದ್ದರು. ಮೊನ್ನೆ ಎರಡು ಶಾಸಕ ಸ್ಥಾನಗಳನ್ನು ಗೆದ್ದಿದೇವೆ. ಅದೇ ರೀತಿ ಜನರ ಮನಸ್ಸನ್ನು ನಾವು ಗೆಲ್ಲಬೇಕು ಎಂದರು.