Home ಟಾಪ್ ಸುದ್ದಿಗಳು ನೀವು ಎಲ್ಲೆಂದರಲ್ಲಿ ತ್ಯಾಜ್ಯಗಳನ್ನು ಎಸೆಯುತ್ತೀರಾ? ಕಾಗೆಯ 38 ಸೆಕೆಂಡ್‌ಗಳ ಈ ವೀಡಿಯೋ ಒಮ್ಮೆ ನೋಡಿ

ನೀವು ಎಲ್ಲೆಂದರಲ್ಲಿ ತ್ಯಾಜ್ಯಗಳನ್ನು ಎಸೆಯುತ್ತೀರಾ? ಕಾಗೆಯ 38 ಸೆಕೆಂಡ್‌ಗಳ ಈ ವೀಡಿಯೋ ಒಮ್ಮೆ ನೋಡಿ

ವೈಯಕ್ತಿಕ ಶುಚಿತ್ವದಲ್ಲಿ ಅನೇಕರು ಮುಂಚೂಣಿಯಲ್ಲಿದ್ದರೂ ಪರಿಸರ ನೈರ್ಮಲ್ಯದ ವಿಷಯದಲ್ಲಿ ಹೆಚ್ಚಿನವರು ಹಿಂದೆಯೇ ಇದ್ದಾರೆ. ರಸ್ತೆಯ ಮೇಲೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಜಾಗರೂಕತೆ ಪಾಲಿಸದೆ ಎಲ್ಲೆಂದರಲ್ಲಿ ತ್ಯಾಜ್ಯಗಳನ್ನು ಎಸೆಯಲು ಯಾರೂ ಹಿಂಜರಿಕೆ ತೋರಿಸುವುದಿಲ್ಲ.

ಸಾರ್ವಜನಿಕ ಸ್ಥಳಗಳಲ್ಲಿ ಇರಿಸಿದ ತ್ಯಾಜ್ಯ ತೊಟ್ಟಿಗಳನ್ನು ನೋಡಿದರೆ ಅದರೊಳಗಡೆ ಇರುವುದಕ್ಕಿಂತ ಹೆಚ್ಚಿನ ತ್ಯಾಜ್ಯ ಹೊರಗೆ ಬಿದ್ದಿರುತ್ತದೆ. ಮನುಷ್ಯರು ತುಂಬಾ ಸೋಮಾರಿಯಂತೆ ವರ್ತಿಸುತ್ತಿರುವ ಈ ಜಗತ್ತಿನಲ್ಲಿ ಕಾಗೆಯೊಂದು ಮಾನವರಿಗೆ ಪಾಠವನ್ನು ಕಲಿಸುತ್ತಿದೆ…. ಅದೊಂದು ಸ್ವಚ್ಛತೆಯ ಪಾಠ!

https://twitter.com/susantananda3/status/1377521221256966146

ಸಾರ್ವಜನಿಕ ಸ್ಥಳದಲ್ಲಿ ಎಸೆದ ಪ್ಲಾಸ್ಟಿಕ್ ಚೀಲಗಳು ಮತ್ತು ಕಾಗದಗಳನ್ನು ಕಾಗೆಯೊಂದು ತ್ಯಾಜ್ಯ ತೊಟ್ಟಿಯಲ್ಲಿ ತಂದು ಹಾಕುತ್ತಿವೆ. ಕಾಗೆ ಪ್ರತಿಯೊಂದು ತ್ಯಾಜ್ಯವನ್ನು ತೊಟ್ಟಿಯಲ್ಲಿ ಬಹಳ ನಿಖರತೆಯಿಂದ ಸಂಗ್ರಹಿಸುತ್ತಿದೆ. ಇಡೀ ಪ್ರದೇಶವನ್ನು ಸ್ವಚ್ಛಗೊಳಿಸಿದ ನಂತರವೇ ಕಾಗೆಯು ಸುಮ್ಮನಾಗುತ್ತದೆ.

ಐಎಫ್‌ಎಸ್ ಅಧಿಕಾರಿ ಸುಶಾಂತ ನಂದಾ 38 ಸೆಕೆಂಡುಗಳ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ಮನುಷ್ಯರಿಗೆ ನಾಚಿಕೆ ಎಂಬುದು ಇಲ್ಲ ಎಂದು ಈ ಕಾಗೆಗೆ ತಿಳಿದಿದೆ” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಸುಶಾಂತ ಹಂಚಿಕೊಂಡಿದ್ದಾರೆ.

ಲಕ್ಷಾಂತರ ಜನರು ಈಗಾಗಲೇ ಈ ವೀಡಿಯೊವನ್ನು ವೀಕ್ಷಿಸಿದ್ದಾರೆ. ಇದೊಂದು ಬುದ್ಧಿವಂತ ಕಾಗೆ, ವೀಡಿಯೊ ನೋಡಿ ಸಂತೋಷವಾಯಿತು ಎಂದು ವೀಡಿಯೊವನ್ನು ನೋಡಿದ ಜನರು ಹೇಳಿದ್ದಾರೆ. ಇದು ತರಬೇತಿ ಪಡೆದ ಕಾಗೆಯಾಗಿರಬಹುದು ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version