ಭಾರತದ ಯಾವ ರಾಜ್ಯ ಜಗತ್ತಿನಲ್ಲೇ ಅತೀ ಕೆಟ್ಟ ವಾಯುಮಾಲಿನ್ಯ ಪ್ರದೇಶ ಗೊತ್ತಾ ?

Prasthutha|

ಜಿನೇವಾ : ಸ್ವಿಜರ್ ಲ್ಯಾಂಡ್ ಮೂಲದ ಸಂಯುಕ್ತ ರಾಷ್ಟ್ರ ಸಂಸ್ಥೆಯ ತಾಂತ್ರಿಕ ಪಾಲುದಾರ ಆಗಿರುವ ಇಕ್ (ಐಕ್ಯೂ) ಏರ್ ಎಂಬ ಸೇವಾ ಸಂಸ್ಥೆಯು ವಾಯು ಮಾಲಿನ್ಯದ ಅಧ್ಯಯನ ನಡೆಸಿ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾರತದ ಮೂರು ನಗರಗಳಂತೂ ಅತಿ ಕೆಟ್ಟ ಸ್ಥಿತಿಯಲ್ಲಿವೆ ಎಂದು ಐಕ್ಯೂ ಏರ್ ಹೇಳಿದೆ.

- Advertisement -


ಐಕ್ಯೂ ಏರ್ ಪ್ರಕಾರ 556 ಎಕ್ಯೂಐ ಹೊಂದಿರುವ ದೆಹಲಿಯ ವಾಯು ಮಾಲಿನ್ಯವು ಜಗತ್ತಿನಲ್ಲೇ ಅತಿ ಕೆಟ್ಟದ್ದಾಗಿದೆ. ಹತ್ತು ವಾಯು ಮಾಲಿನ್ಯದ ನಗರಗಳು ಮುಂದಿನಂತಿವೆ.ವಾಯು ಮಾಲಿನ್ಯವು ದೆಹಲಿಯನ್ನು ಮಾತ್ರವಲ್ಲ ಜಗತ್ತಿನ ನಾನಾ ಸ್ಥಳಗಳನ್ನು ಕಾಡುತ್ತಿದೆ. ಆದರೆ ಹೆಚ್ಚಿನ ವಾಯು ಮಾಲಿನ್ಯದ ನಗರಗಳು ಭಾರತದಲ್ಲಿ ಕಂಡು ಬರುತ್ತವೆ.


1 ದೆಹಲಿ, ಭಾರತ – ಎಕ್ಯೂಐ 556
2 ಲಾಹೋರ್, ಪಾಕಿಸ್ತಾನ- ಎಕ್ಯೂಐ 354
3 ಸೋಫಿಯಾ, ಬಲ್ಗೇರಿಯಾ- ಎಕ್ಯೂಐ 178
4 ಕೊಲ್ಕತ್ತಾ, ಭಾರತ- 177
5 ಝಗ್ರೆಬ್, ಕ್ರೋಶಿಯಾ- 173
6 ಮುಂಬಯಿ, ಭಾರತ- ಎಕ್ಯೂಐ 169
7 ಬೆಲ್ ಗ್ರೇಡ್, ಸೆರ್ಬಿಯಾ- ಎಕ್ಯೂಐ 165
8 ಚೆಂಗ್ಡು, ಚೀನಾ- ಎಕ್ಯೂಐ 165
9 ಸ್ಕೋಪ್ಜೆ, ಉತ್ತರ ಮೆಸೆಡೋನಿಯಾ- ಎಕ್ಯೂಐ 164
10 ಕ್ರಾಕೊವ್, ಪೋಲಂಡ್- ಎಕ್ಯೂಐ 160

- Advertisement -


ದೆಹಲಿಯ ವಾಯು ಮಾಲಿನ್ಯವು ಜಜ್ಜರ್, ಗುರುಗಾಂವ್, ಬಾಗಪತ್, ಗಾಜಿಯಾಬಾದ್, ಸೋನೆಪತ್ ಗಳಿಗೂ ವ್ಯಾಪಿಸಿದೆ ಎಂದು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯೊರಾಲಜಿ ಹೇಳಿದೆ.

Join Whatsapp