ಚಿನ್ನ ಗೆದ್ದ ನೀರಜ್ ಚೋಪ್ರಾಗೆ ಸಿಕ್ಕ ಒಟ್ಟು ಬಹುಮಾನದ ಹಣವೆಷ್ಟು ಗೊತ್ತೇ?

Prasthutha|

ಭಾರತೀಯ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ನೀರಜ್ ಅವರನ್ನು ಗೌರವಿಸಲು, ದೇಶದ ಹಲವು ಗಣ್ಯ ವ್ಯಕ್ತಿಗಳು ಮತ್ತು ಸಂಸ್ಥೆಗಳು ನೀರಜ್ ​ಗೆ ಬಹುಮಾನವನ್ನು ಘೋಷಿಸಿವೆ. ಇದರಲ್ಲಿ ವಿವಿಧ ರಾಜ್ಯಗಳ ಸರ್ಕಾರಗಳು ಸಹ ಕೊಡುಗೆ ನೀಡಿವೆ. ನೀರಜ್ ವಾಸಿಸುವ ಹರಿಯಾಣ ರಾಜ್ಯದಿಂದ ಮೊದಲು ಆರಂಭವಾಗಿದ್ದು ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ನೀರಜ್ ಚೋಪ್ರಾ ಅವರಿಗೆ ಸರ್ಕಾರದ ಪರವಾಗಿ 6 ​​ಕೋಟಿ ಬಹುಮಾನವನ್ನು ಘೋಷಿಸಿದರು. ಅವರಿಗೆ ಕ್ಲಾಸ್ ಒನ್ ಉದ್ಯೋಗ ಮತ್ತು ಪಂಚಕುಲದಲ್ಲಿ ಅಥ್ಲೆಟಿಕ್ಸ್ ಸೆಂಟರ್ ಆಫ್ ಎಕ್ಸಲೆನ್ಸ್‌ನ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದೆ.

- Advertisement -

ಹರಿಯಾಣದ ನಂತರ ನೆರೆಯ ಪಂಜಾಬ್ ಕೂಡ ನೀರಜ್ ಗೆ ಪ್ರಶಸ್ತಿಯನ್ನು ಘೋಷಿಸಿತು. ಪಂಜಾಬ್ ಸರ್ಕಾರ ನೀರಜ್ ಗೆ 2 ಕೋಟಿ ಬಹುಮಾನವನ್ನು ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಘೋಷಣೆ ಮಾಡಿದ್ದಾರೆ. ಮಣಿಪುರ ರಾಜ್ಯ ಸರ್ಕಾರವು ನೀರಜ್ ಚೋಪ್ರಾಗೆ 1 ಕೋಟಿ ರೂ. ಬಹುಮಾನ ನೀಡಿದೆ.

ಜೊತೆಗೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪದಕ ವಿಜೇತರಿಗೆ ನಗದು ಬಹುಮಾನ ಘೋಷಿಸಿದೆ. ಇದರಲ್ಲಿ ಒಂದು ಕೋಟಿ ರೂಪಾಯಿಗಳನ್ನು ನೀರಜ್‌ ಗೆ ನೀಡಲಾಗುವುದು. ಬೆಳ್ಳಿ ಪದಕ ವಿಜೇತರಿಗೆ 50 ಲಕ್ಷ ಮತ್ತು ಕಂಚಿನ ಪದಕ ವಿಜೇತರಿಗೆ 25 ಲಕ್ಷ ರೂ. ಭಾರತೀಯ ಹಾಕಿ ತಂಡಕ್ಕೆ 1.25 ಕೋಟಿ ರೂ. ನೀಡುವುದಾಗಿ ಬಿಸಿಸಿಐ ಕಾರ್ಯದರ್ಶಿ ಜೈ ಶಾ ನೀಡಿದ್ದಾರೆ.

- Advertisement -

ಬಿಸಿಸಿಐ ಜೊತೆಗೆ ಇಂಡಿಯನ್ ಪ್ರೀಮಿಯರ್ ಲೀಗ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಕೂಡ ನೀರಜ್ ​ಗೆ 1 ಕೋಟಿ ರೂ. ಬಹುಮಾನ ನೀಡಿದೆ. ತಂಡದ ಆಡಳಿತದ ಪ್ರಕಾರ, ಚೆನ್ನೈ ಸೂಪರ್ ಕಿಂಗ್ಸ್ ನೀರಜ್ ಚೋಪ್ರಾ ಅವರ ಅತ್ಯುತ್ತಮ ಸಾಧನೆಗಾಗಿ 1 ಕೋಟಿ ರೂಪಾಯಿಗಳನ್ನು ಬಹುಮಾನವಾಗಿ ನೀಡುತ್ತದೆ ಮತ್ತು ಅವರಿಗೆ ವಿಶೇಷ ಜರ್ಸಿ ಸಂಖ್ಯೆ 8758 ಅನ್ನು ಕೂಡ ನೀಡುತ್ತದೆ ಎಂದು ಹೇಳಿಕೊಂಡಿದೆ.


ಇನ್ನು ಬೈಜುಜ್, ಆನ್‌ಲೈನ್ ಶಿಕ್ಷಣ ಕಂಪನಿಯು ನೀರಜ್‌ ಗೆ 2 ಕೋಟಿ ಬಹುಮಾನವನ್ನು ಘೋಷಿಸಿದೆ. ಇದರ ಜೊತೆಗೆ, ಇತರ ಒಲಿಂಪಿಕ್ ಪದಕ ವಿಜೇತರು ಸಹ 1 ಕೋಟಿ ನಗದು ಬಹುಮಾನವನ್ನು ಪಡೆಯುತ್ತಾರೆ.



Join Whatsapp