Home ಟಾಪ್ ಸುದ್ದಿಗಳು ಕೋವಿಡ್ ಕರ್ತವ್ಯದಲ್ಲಿರುವ ವೈದ್ಯರಿಗೆ ದಿನಕ್ಕೆ 8 ಗಂಟೆಗಿಂತ ಹೆಚ್ಚು ಕೆಲಸ ಕೊಡಬೇಡಿ: ಇಂಡಿಯನ್ ಮೆಡಿಕಲ್ ಅಸೋಸಿಯೇಶನ್

ಕೋವಿಡ್ ಕರ್ತವ್ಯದಲ್ಲಿರುವ ವೈದ್ಯರಿಗೆ ದಿನಕ್ಕೆ 8 ಗಂಟೆಗಿಂತ ಹೆಚ್ಚು ಕೆಲಸ ಕೊಡಬೇಡಿ: ಇಂಡಿಯನ್ ಮೆಡಿಕಲ್ ಅಸೋಸಿಯೇಶನ್

ನವದೆಹಲಿ: ಕೋವಿಡ್ ಕರ್ತವ್ಯದಲ್ಲಿರುವ ನಿವಾಸಿ ವೈದ್ಯರನ್ನು ದಿನಕ್ಕೆ 8 ಗಂಟೆಗಿಂತ ಹೆಚ್ಚು ಕೆಲಸ ಮಾಡಿಸಬಾರದು ಮತ್ತು ಒಂದು ವಾರದ ನಂತರ ಆಸ್ಪತ್ರೆ ಸೂಚಿಸಿದ ವಸತಿ ಗೃಹದಲ್ಲಿ 10 ರಿಂದ 14 ದಿನಗಳ ವರೆಗೆ ಅವರಿಗೆ ಕ್ವಾರಂಟೈನ್ ವ್ಯವಸ್ಥೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಒತ್ತಾಯಿಸಿದೆ.

ಇತ್ತೀಚೆಗೆ ಹೆಚ್ಚಾಗಿ ಕೋವಿಡ್ ಕರ್ತವ್ಯದಲ್ಲಿರುವ ವೈದ್ಯರು ಕಾಯಿಲೆಗೆ ತುತ್ತಾಗುತ್ತಿದ್ದು, ಅವರನ್ನು ಆದಷ್ಟು ಶೀಘ್ರದಲ್ಲಿ ಆಸ್ಪತ್ರೆಗೆ ದಾಖಲಿಸಬೇಕಾಗಿದೆ.

“ವೈದ್ಯರು ಕರ್ತವ್ಯದಲ್ಲಿದ್ದಾಗ ಅಕಾಲಿಕವಾಗಿ ಮೃತಪಟ್ಟರೆ, ಅಂತಹವರಿಗೆ ಕೋವಿಡ್ ನಿಂದ ಹುತಾತ್ಮರಾದ ಸ್ಥಾನಮಾನ ಮತ್ತು ಸಂತ್ರಸ್ತ ಕುಟುಂಬಕ್ಕೆ ಪರಿಹಾರ, ಪ್ರಕರಣವಾರು ನೆರವನ್ನು ನೀಡಬೇಕು” ಎಂದು ಸಂಘ ಆಗ್ರಹಿಸಿದೆ.

ಕೋವಿಡ್ ನ ಎರಡನೆಯ ಅಲೆಯ ಸಮಯದಲ್ಲಿ ಸುಮಾರು 2000 ರಷ್ಟು ವೈದ್ಯರು ಮೃತಪಟ್ಟಿದ್ದರು ಎಂದು ಐಎಂಎ ಹೇಳಿದೆ.
“ದೇಶದಲ್ಲಿ ಮರಣ ಪ್ರಮಾಣವು ಸಾಮಾನ್ಯ ಜನರಲ್ಲಿ ಸುಮಾರು ಶೇ.1.5 ರಷ್ಟು ಮತ್ತು ಆರೋಗ್ಯ ಕಾರ್ಯಕರ್ತರ ನಡುವೆ ಸುಮಾರು ಶೇ.2ರಿಂದ 3 ರಷ್ಟು ಹೆಚ್ಚಿದೆ. ಅಂದಾಜಿನ ಪ್ರಕಾರ 10,000 ದಷ್ಟು ವೈದ್ಯರಿಗೆ ಕೋವಿಡ್ ಸೋಂಕು ತಗುಲಿದೆ ಎಂದು ಐಎಂಎ ಮಾಹಿತಿ ನೀಡಿದೆ.


ಕೋವಿಡ್ ನ ಮೂರನೆ ಅಲೆಯಾದ ಓಮಿಕ್ರಾನ್ , ಡೆಲ್ಟಾದ ರೂಪಾಂತರಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಹರಡುವುದರಿಂದ ವೈದ್ಯರಿಗೆ ಸಾಮಾನ್ಯ ಜನರಿಗಿಂತ ಹತ್ತು ಪಟ್ಟು ಹೆಚ್ಚಾಗಿ ಹರಡುವ ಸಂಭವವಿದೆ ಎಂದು ಅದು ಎಚ್ಚರಿಸಿದೆ.

Join Whatsapp
Exit mobile version