ಒಂದು ತಿಂಗಳಿನಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆ ಹೇರಬೇಡಿ, ಒಂದೇ ಪರೀಕ್ಷೆ ನಡೆಸಿ : ಎಐಡಿಎಸ್‌ಓ ಆಗ್ರಹ

Prasthutha|

ಬೆಂಗಳೂರು : ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಒಂದು ತಿಂಗಳಿನಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆ ನಡೆಸದೆ, ಒಂದೇ ಪರೀಕ್ಷೆ ನಡೆಸುವಂತೆ ಎಐಡಿಎಸ್‌ಓ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್‌ ಸರಕಾರವನ್ನು ಆಗ್ರಹಿಸಿದ್ದಾರೆ.

- Advertisement -

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಳೆದ ಸುಮಾರು ಎರಡು – ಮೂರು ವಾರಗಳಿಂದ ರಾಜ್ಯದ ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳು ಒಕ್ಕೊರಲಿನಿಂದ ಸರ್ಕಾರಕ್ಕೆ ‘ ಹಿಂದಿನ ಸೆಮಿಸ್ಟರ್ ಪರೀಕ್ಷೆ ರದ್ದುಗೊಳಿಸಿ ‘ ಎಂದು ಆಗ್ರಹಿಸುತ್ತಿದ್ದಾರೆ. ವಿದ್ಯಾರ್ಥಿಗಳ ಬೇಡಿಕೆಗಳನ್ನು ಸರ್ಕಾರಕ್ಕೆ ತಟ್ಟುವಂತೆ ಮಾಡಲು ಹಲವು ರೀತಿಯಲ್ಲಿ ಪ್ರಯತ್ನ ನಡೆದಿದೆ. ಆನ್ ಲೈನ್ ಚಳುವಳಿ, ಪ್ರಾತಿನಿಧಿಕವಾಗಿ ಕಾಲೇಜು, ವಿವಿಗಳ ಮುಂದೆ ಚಳುವಳಿ, ಪ್ರಾಂಶುಪಾಲರಿಗೆ, ವಿವಿಯ ಕುಲಪತಿಗಳಿಗೆ ಮನವಿ ಪತ್ರ ಸಲ್ಲಿಕೆ, ಶಾಸಕರುಗಳಿಗೆ, ಮಾನ್ಯ ಉಪಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಪತ್ರ ಸಲ್ಲಿಕೆ, ರಾಜ್ಯವ್ಯಾಪಿ ಆನ್ಲೈನ್‌ತರಗತಿ ಬಹಿಷ್ಕಾರ – ಈ ಎಲ್ಲವೂ ಈಗಾಗಲೇ ನಡೆದಿವೆ. ಆದರೆ ಸರ್ಕಾರದಿಂದ ಯಾವುದೇ ಪ್ರತ್ಯುತ್ತರ ಇಲ್ಲದ ಕಾರಣ, ವಿದ್ಯಾರ್ಥಿಗಳು ಹೋರಾಟವನ್ನು ಇನ್ನೂ ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುವ ಅನಿವಾರ್ಯತೆ ಬಂದಿದೆ ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ, ರಾಜ್ಯ ಮಟ್ಟದ ವಿದ್ಯಾರ್ಥಿಗಳ ಹೋರಾಟ ಸಮಿತಿ ಮತ್ತು ಎಐಡಿಎಸ್‌ಓ ರಾಜ್ಯ ಸಮಿತಿಯು ಜುಲೈ ೪, ೫, ೬ ರಂದು ೩ ದಿನಗಳ ಕಾಲ ರಾಜ್ಯದಾದ್ಯಂತ ಸಹಿ ಸಂಗ್ರಹ ಚಳುವಳಿಯನ್ನು ಹಮ್ಮಿಕೊಂಡಿವೆ. ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳ ವಿದ್ಯಾರ್ಥಿಗಳು ಈ ಚಳುವಳಿಯಲ್ಲಿ ತೊಡಗಿದ್ದಾರೆ. ವಿವಿ ಮಟ್ಟದಲ್ಲಿ, ಕಾಲೇಜು ಮಟ್ಟದಲ್ಲಿ, ತಾಲ್ಲೂಕು – ಜಿಲ್ಲಾ ಮಟ್ಟದಲ್ಲಿ ಮತ್ತು ಹಳ್ಳಿಗಳಲ್ಲೆಲ್ಲಾ ಜನಸಾಮಾನ್ಯರ ಹಾಗೂ ಹಲವಾರು ಶಿಕ್ಷಣ ತಜ್ಞರು, ಬುದ್ದಿಜೀವಿಗಳ ಸಹಿಗಳನ್ನು ಸಂಗ್ರಹಿಸಲಾಗುತ್ತಿದೆ. ಈ ಜನಭಿಪ್ರಾಯದ ಸಹಿಸಂಗ್ರಹವನ್ನು ಮನವಿ ಪತ್ರದೊಂದಿಗೆ ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುತ್ತಿದೆ. ಸರ್ಕಾರವು ನಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ತಕ್ಷಣವೇ ಸ್ಪಂದಿಸಬೇಕೆಂಬುದು ವಿದ್ಯಾರ್ಥಿಗಳ ಒಕ್ಕೊರಲಿನ ಆಗ್ರಹ ಎಂದು ಹೇಳಿದರು.

- Advertisement -

ಈ ಸಂದರ್ಭ ಸಹಿ ಅಭಿಯಾನದ ಗ್ರಹದ ಕುರಿತು ವರದಿಯನ್ನು ಬಿಡುಗಡೆ ಮಾಡಿದರು, ಆನ್‌ಲೈನ್ ಹಾಗೂ ಆಫ್ ಲೈನ್ ಸಮೀಕ್ಷೆಯಲ್ಲಿ ೧,೧೦,೦೦೦ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಭಾಗವಹಿಸಿದ್ದಾರೆ ಹಾಗೂ ಶೀಘ್ರದಲ್ಲೇ  ಸನ್ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವಿದ್ಯಾರ್ಥಿಗಳ ಬೇಡಿಕೆಗಳ ಮನವಿ ಹಾಗೂ ಸಹಿ ಸಂಗ್ರಹದ ವರದಿಯನ್ನು ಸಲ್ಲಿಸುವುದಾಗಿ ತಿಳಿಸಿದರು.

ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿAಗ್ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಹಿಂದಿನ ಸೆಮಿಸ್ಟರ್(ಬೆಸ ಸೆಮಿಸ್ಟರ್) ಪರೀಕ್ಷೆಗಳನ್ನು ನಡೆಸಬಾರದು.ಎಲ್ಲಾ ವಿದ್ಯಾರ್ಥಿಗಳಿಗೂ ಎರಡು ಡೋಸ್‌ಉಚಿತ ಲಸಿಕೆ ನೀಡುವವರೆಗೂ ಆಫ್ ಲೈನ್‌ತರಗತಿ / ಪರೀಕ್ಷೆಗಳನ್ನು ನಡೆಸಬಾರದು ಎಂದು ಒತ್ತಾಯಿಸಿದ್ದಾರೆ.

ಸಹಿ ಸಂಗ್ರಹದ ಅಭಿಯಾನದಲ್ಲಿ ಭಾಗಿಯಾದ ಪ್ರಮುಖ ಶಿಕ್ಷಣ ತಜ್ಞರುಗಳಾದ  ಶ್ರೀ. ಅಲ್ಲಮಪ್ರಭು ಬೆಟ್ಟದೂರು(ನಿವೃತ್ತ ಪ್ರಾಂಶುಪಾಲರು, ಶಿಕ್ಷಣ ತಜ್ಞರು, ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯಾಧ್ಯಕ್ಷರು), ಪ್ರೊ. ಡಾ. ಎಮ್.ವಿ. ನದಕರ್ಣಿ( ಮಾಜಿ ಕುಲಪತಿಗಳು, ಕಲ್ಬುರ್ಗಿ ವಿಶ್ವವಿದ್ಯಾನಿಲಯ), ಡಾ. ಎಮ್.ಎಸ್.ತಿಮ್ಮಪ್ಪ(ಮಾಜಿ ಕುಲಪತಿಗಳು, ಬೆಂಗಳೂರು ವಿಶ್ವವಿದ್ಯಾನಿಲಯ), ಪ್ರೊ. ಡಾ.ಆರ್. ಎನ್ ಶ್ರೀನಿವಾಸ ಗೌಡ( ಮಾಜಿ ಕುಲಪತಿಗಳು, ಕರ್ನಾಟಕ ಪಶು ಸಂಗೋಪನೆ, ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾನಿಲಯ), ಪ್ರೊ. ಪಿ.ವಿ. ನಾರಾಯಣ( ಕನ್ನಡ ಲೇಖಕರು), ಪ್ರೊ. ಚಂದ್ರ ಪೂಜಾರಿ( ನಿವೃತ್ತ ಪ್ರಾಧ್ಯಾಪಕರು, ಹಂಪಿ ಕನ್ನಡ ವಿಶ್ವವಿದ್ಯಾನಿಲಯ), ಪ್ರೊ. ರಾಜೇಂದ್ರ ಚೆನ್ನಿ( ನಿವೃತ್ತ ಪ್ರಾದ್ಯಾಪಕರು, ಕುವೆಂಪು ವಿಶ್ವವಿದ್ಯಾನಿಲಯ), ಪ್ರೊ. ಡಾ. ಎನ್.ಪ್ರಭುದೇವ್( ಶಿಕ್ಷಣ ತಜ್ಞರು, ಪ್ರಖ್ಯಾತ ವೈದ್ಯರು, ಮಾಜಿ ಕುಲಪತಿಗಳು, ಬೆಂಗಳೂರು ವಿಶ್ವವಿದ್ಯಾನಿಲಯ), ಪ್ರೊ. ಎ.ಮುರಿಗೆಪ್ಪ (ಮಾಜಿ ಕುಲಪತಿಗಳು, ಹಂಪಿ ಕನ್ನಡ ವಿಶ್ವವಿದ್ಯಾನಿಲಯ), ಡಾ. ಮಹಾಬಲೇಶ್ವರ್ ರಾವ್( ಶಿಕ್ಷಣ ತಜ್ಞರು, ನಿವೃತ್ತ ಪ್ರಾಂಶುಪಾಲರು, ಟಿಎಮ್‌ಎ ಪೈ ಕಾಲೇಜ್ ಆಫ್ ಎಜುಕೇಷನ್), ಪ್ರೊ. ಪುರುಷೋತ್ತವi ಬಿಳಿಮಲೆ(ನಿವೃತ್ತ ಕನ್ನಡ ಪ್ರಾಧ್ಯಾಪಕರು, ಜವಹರ್‌ಲಾಲ್ ನೆಹರು ವಿಶ್ವವಿದ್ಯಾನಿಲಯ), ಡಾ.ಕೆ. ಮರಳುಸಿದ್ದಪ್ಪ( ನಿವೃತ್ತ ಪ್ರಾಧ್ಯಾಪಕರು, ಬೆಂಗಳೂರು ವಿಶ್ವವಿದ್ಯಾನಿಲಯ), ಪ್ರೊ. ದೊಡ್ಡರಂಗೇಗೌಡ(ಖ್ಯಾತ ಸಾಹಿತಿಗಳು, ಪದ್ಮಶ್ರೀ ಪುರಸ್ಕೃತರು) ಮುಂತಾದ ಪ್ರಮುಖ ಶಿಕ್ಷಣ ತಜ್ಞರು ಭಾಗಿಯಾಗಿದ್ದರು.



Join Whatsapp