Home ಟಾಪ್ ಸುದ್ದಿಗಳು ಇಸ್ರೋ ಗಗನಯಾನ ಯೋಜನೆ ವರ್ಗಾವಣೆ ಪ್ರಸ್ತಾಪ ಕೈಬಿಡಲು ಪ್ರಧಾನಿ ನರೇಂದ್ರ ಮೋದಿಗೆ ಡಿಕೆ ಶಿವಕುಮಾರ್ ಪತ್ರ

ಇಸ್ರೋ ಗಗನಯಾನ ಯೋಜನೆ ವರ್ಗಾವಣೆ ಪ್ರಸ್ತಾಪ ಕೈಬಿಡಲು ಪ್ರಧಾನಿ ನರೇಂದ್ರ ಮೋದಿಗೆ ಡಿಕೆ ಶಿವಕುಮಾರ್ ಪತ್ರ

ಬೆಂಗಳೂರು: ಇಸ್ರೋ ಸಂಸ್ಥೆಯ ಮಹತ್ವಾಕಾಂಕ್ಷಿ ಭಾರತೀಯ ಮಾನವಸಹಿತ ಗಗನಯಾನ ಯೋಜನೆಯನ್ನು

ಬೆಂಗಳೂರಿನಿಂದ ಗುಜರಾತ್‌ಗೆ ವರ್ಗಾಯಿಸುವ ಪ್ರಸ್ತಾವನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪತ್ರ ಬರೆದಿದ್ದಾರೆ.

ಮಾನವ ಸಹಿತ ನೌಕೆಯನ್ನು ಬಾಹ್ಯಾಕಾಶಕ್ಕೆ ತಲುಪಿಸುವ ಯೋಜನೆ ಇದಾಗಿದ್ದು, 2007ರಿಂದಲೇ ಚಾಲನೆ ನೀಡಲಾಗಿದೆ. 2023 ಕ್ಕೆ ಯೋಜನೆ ಪೂರ್ಣಗೊಳ್ಳುವ ಹಂತದಲ್ಲಿದ್ದು ಇದೇ ಸಂದರ್ಭದಲ್ಲಿ ಯೋಜನೆಯನ್ನು ಬೆಂಗಳೂರಿನಿಂದ ಗುಜರಾತ್‌ಗೆ ಸ್ಥಳಾಂತರ ಮಾಡಲು ಪ್ರಸ್ತಾವನೆ ಇದೆ.

ಈ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರವನ್ನು ಬರೆದು ಈ ಪಸ್ತಾವನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ. ನಿಮ್ಮ ಬಿಡುವಿಲ್ಲದ ಸಮಯದಲ್ಲೂ ನಮ್ಮ ಮನವಿಯತ್ತ ಗಮನಹರಿಸಿ ಎಂದು ಕೋರುತ್ತೇನೆ . ಕರ್ನಾಟಕ ನಾಡಿನ ಜನರ ಹೆಮ್ಮೆ,  ಆತ್ಮಗೌರವಕ್ಕೆ ಸಂಬಂಧಪಟ್ಟ ಯೋಜನೆ ವಿಚಾರವಾಗಿ ನಾನು ಇಂದು ನಿಮ್ಮ ಗಮನ ಸೆಳೆಯುತ್ತಿದ್ದೇನೆ. ಇದು ನನ್ನ ಕರ್ತವ್ಯವೂ ಆಗಿದೆ. ಇಸ್ರೋ ಸಂಸ್ಥೆಯ ಬಗ್ಗೆ ಕನ್ನಡಿಗರಿಗೆ ಹೆಮ್ಮೆ ಇದೆ. ಈ ಸಂಸ್ಥೆ ಬಾಹ್ಯಾಕಾಶದಲ್ಲಿ ಮಹತ್ವದ ಸಾಧನೆಯನ್ನು ಮಾಡಿರುವ ಹೆಗ್ಗಳಿಗೆ ಇದೆ. ಇಸ್ರೋ ಸಂಸ್ಥೆ 2023 ಕ್ಕೆ ಗಗನಯಾನ ಯೋಜನೆಯನ್ನು ಜಾರಿಗೊಳಿಸಲು ನಿರ್ಧಾರ ಮಾಡಿದೆ.

ಈ ಯೋಜನೆ ಯಶಸ್ವಿಯಾದರೆ ಅಮೆರಿಕಾ, ಚೀನಾ, ಸೋವಿಯತ್ ಯೂನಿಯನ್ ನಂತರ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ದೇಶ ಭಾರತವಾಗಲಿದೆ. ಆದರೆ ಈ ಯೋಜನೆಯನ್ನು ಗುಜರಾತ್‌ಗೆ ವರ್ಗಾವಣೆ ಮಾಡುವ ನಿರ್ಧಾರವನ್ನು ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ಇದೇ ಸಂದರ್ಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ಡಿಕೆ ಶಿವಕುಮಾರ್ ಪತ್ರವನ್ನು ಬರೆದಿದ್ದು, ಸಂಸದರ ನಿಯೋಗದ ಜೊತೆಗೆ ಪ್ರಧಾನಿಯನ್ನು ಭೇಟಿ ಮಾಡಿ ಪ್ರಸ್ತಾವನೆಯನ್ನು ಕೈಬಿಡಲು ಮನವರಿಕೆ ಮಾಡುವಂತೆ ಮನವಿ ಮಾಡಿ ಎಂದು ಕೇಳಿಕೊಂಡಿದ್ದಾರೆ.

Join Whatsapp
Exit mobile version