Home ಟಾಪ್ ಸುದ್ದಿಗಳು 136 ಸ್ಥಾನ ಬರುತ್ತೆ ಎಂದಿದ್ದಕ್ಕೆ ನನ್ನನ್ನು ಮೆಂಟಲ್ ಎಂದು ಲೇವಡಿ ಮಾಡಿದ್ದರು: ಡಿಕೆ ಶಿವಕುಮಾರ್

136 ಸ್ಥಾನ ಬರುತ್ತೆ ಎಂದಿದ್ದಕ್ಕೆ ನನ್ನನ್ನು ಮೆಂಟಲ್ ಎಂದು ಲೇವಡಿ ಮಾಡಿದ್ದರು: ಡಿಕೆ ಶಿವಕುಮಾರ್

►ಕ್ವಿಟ್ ಇಂಡಿಯಾ ಚಳುವಳಿ ಮಾದರಿಯೇ ಈಗ ಅಗತ್ಯವಿದೆ


ಬೆಂಗಳೂರು: ಸರ್ಕಾರ ಬರುವ ಸಂದರ್ಭದಲ್ಲಿ 136 ಸ್ಥಾನ ಬರುತ್ತದೆ ಎಂದಿದ್ದೆ. ಆಗ ನನ್ನನ್ನು ಬಹಳಷ್ಟು ಜನ ಮೆಂಟಲ್ ಆಗಿದ್ದಾನೆ ಎಂದು ಲೇವಡಿ ಮಾಡಿದ್ದರು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.


ಕೆಪಿಸಿಸಿ ಕಚೇರಿಯಲ್ಲಿ ಕ್ವಿಟ್ ಇಂಡಿಯಾ ಚಳುವಳಿ 82ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವರು ನಾವೇ ಸರ್ಕಾರ ಮಾಡುತ್ತೇವೆ ಎಂದು ಹೇಳಿ ಕೆಲವರ ಕಾಲಿಗೆ ಬಿದ್ದಿದ್ದರು. ಅವರ ಹೆಸರು ಹೇಳುವುದಕ್ಕೆ ನಾನು ಇಷ್ಟಪಡುವುದಿಲ್ಲ. ಸಮ್ಮಿಶ್ರ ಸರ್ಕಾರ ಮಾಡುತ್ತೇವೆ ಎಂದು ಬರೆದುಕೊಂಡಿದ್ದರು. ಆದರೆ ನಾನು ಮಾತ್ರ 136ಕ್ಕೆ ಸ್ಟಿಕ್ ಆಗಿದ್ದೆ ಎಂದರು.


ಸೋನಿಯಾ ಗಾಂಧಿ ಅವರು ಇಷ್ಟು ಸೀಟ್ ಹೇಗೆ ಬರುತ್ತದೆ ಎಂದು ಕೇಳಿದ್ದರು. ನಾನೇ ಹೊಲ ಉತ್ತು, ಗೊಬ್ಬರ ಹಾಕಿದ್ದೇನೆ. ಈ ಕಾರಣದಿಂದ ನನಗೆ ಗೊತ್ತು ಎಂದು ಉತ್ತರಿಸಿದ್ದೆ. ಕೆಲವು ಸೀಟು ಹಂಚಿಕೆಯಲ್ಲಿ ನಾವೂ ಸ್ವಲ್ಪ ತಪ್ಪು ಮಾಡಿದೆವು. 224ರ ಪೈಕಿ 215 ಸೀಟು ಹಂಚಿಕೆ ಒಮ್ಮತದ ಪ್ರಕಾರ ಒಗ್ಗಟ್ಟಿನಲ್ಲೇ ಆಗಿದೆ. ಪಕ್ಷಕ್ಕೋಸ್ಕರ ಹಲವು ಹಿರಿಯರು ಟಿಕೆಟ್ ತ್ಯಾಗ ಮಾಡಿದ್ದಾರೆ. ಮಾಟ ಮಂತ್ರ ಮಾಡಿ ಸರ್ಕಾರ ಮಾಡಿದ್ದೇವೆ ಎಂದು ವಿಪಕ್ಷ ನಾಯಕರೊಬ್ಬರು ಮಾತನಾಡಿದ್ದಾರೆ. ಅವರ ಹೆಸರು ಹೇಳಲು ಇಷ್ಟ ಪಡುವುದಿಲ್ಲ ಎಂದು ಹೇಳಿ ಪರೋಕ್ಷವಾಗಿ ಕುಮಾರಸ್ವಾಮಿ ಅವರಿಗೆ ಟಾಂಗ್ ಕೊಟ್ಟರು.


ಕ್ವಿಟ್ ಇಂಡಿಯಾ ಚಳುವಳಿ ಮಾದರಿಯೇ ಈಗ ಅಗತ್ಯವಿದೆ. ಅಂದು ಬ್ರಿಟಿಷರ ವಿರುದ್ದ ನಾವು ಹೋರಾಟ ಮಾಡಿದ್ದೆವು. ಇಂದು ಕೋಮುವಾದ, ಸರ್ವಾಧಿಕಾರ ವಿರುದ್ದ ನಾವು ಹೋರಾಟ ಮಾಡಬೇಕಾಗಿದೆ ಎಂದರು.

Join Whatsapp
Exit mobile version