ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಇಡಿ ಮತ್ತೆ ನೋಟಿಸ್ ನೀಡಿದೆ.
ಈ ಬಗ್ಗೆ ಮಾತನಾಡಿದ ಡಿಕೆಶಿ, ಎಐಸಿಸಿ ಅಧ್ಯಕ್ಷ ಚುನಾವಣೆ ಹಿನ್ನೆಲೆ ಕಾಲಾವಕಾಶ ಕೇಳಿದ್ದೇನೆ. ಆದರೆ ಇಡಿ ಅಧಿಕಾರಿಗಳು ಆಗಲ್ಲ ಎಂದು ಹೇಳಿದ್ದಾರೆ ಎಂದಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಹಾಗೂ ಯಂಗ್ ಇಂಡಿಯಾ ಕೇಸ್ ನಲ್ಲಿ ಹೊಸ ಸಮನ್ಸ್ ಕೊಟ್ಟಿದ್ದಾರೆ. 7 ನೇ ತಾರಿಕು ನನಗೆ ಹಾಗೂ ಡಿಕೆ ಸುರೇಶ್ ಗೆ ನೋಟಿಸ್ ಕೊಟ್ಟಿದ್ದಾರೆ. ರಾಹುಲ್ ಗಾಂಧಿ ಅಂದು ಆದಿಚುಂಚನಗಿರಿಗೆ ಹೋಗುತ್ತಿದ್ದಾರೆ. 7 ರಂದು ಬಿಟ್ಟು ಬೇರೆ ದಿನ ಕೊಡಿ ಅಂತ ಇನ್ನೊಮ್ಮೆ ಮನವಿ ಮಾಡಿಕೊಂಡಿರುವುದಾಗಿ ಡಿಕೆಶಿ ಹೇಳಿದ್ದಾರೆ.
ಆದಿಚುಂಚನಗಿರಿಗೆ ಪ್ರಿಯಾಂಕ ಗಾಂಧಿ ಕೂಡ ಭೇಟಿ ನೀಡುವ ಸಾಧ್ಯತೆ ಇದೆ. ನಾನು ಇಲ್ಲದೇ ಹೋದ್ರೆ ತಪ್ಪಾಗುತ್ತದೆ. ಎಲ್ಲಾ ಜವಾಬ್ದಾರಿ ನನ್ನ ತಮ್ಮನೇ ಮಾಡುತ್ತಿದ್ದಾನೆ ಎಂದರು.