ಟ್ಯಾಂಕರ್ ಮಾಫಿಯಾಗೆ ಬ್ರೇಕ್: ಹೊಸ ದರ ನಿಗದಿ ಮಾಡಿ ಜಿಲ್ಲಾಡಳಿತ ಆದೇಶ

Prasthutha|

ಬೆಂಗಳೂರು: ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಜಲಕ್ಷಾಮದ ಲಾಭ ಪಡೆದು ನಾಗರಿಕರನ್ನು ಹಿಂಡುತ್ತಿರುವ ವಾಟರ್ ಟ್ಯಾಂಕರ್ ಮಾಫಿಯಾಕ್ಕೆ ಸರ್ಕಾರ ಕೊನೆಗೂ ಬ್ರೇಕ್ ಹಾಕಿದೆ. ಜಿಲ್ಲಾಡಳಿತ ಕೊನೆಗೂ ಟ್ಯಾಂಕರ್ ನೀರಿಗೆ ದರ ಫಿಕ್ಸ್ ಮಾಡಿ ಆದೇಶ ಹೊರಡಿಸಿದೆ.

- Advertisement -


6 ಸಾವಿರ ಲೀಟರ್ ಸಾಮರ್ಥ್ಯದ ವಾಟರ್ ಟ್ಯಾಂಕರ್ ಅನ್ನು ಬಾಡಿಗೆ ಪಡೆದರೆ ಪ್ರತಿ ದಿನಕ್ಕೆ 5,200 ರೂಪಾಯಿಗಳನ್ನು ಪಾವತಿಸಬೇಕಾಗಿದ್ದು, 12 ಸಾವಿರ ಲೀಟರ್ ಸಾಮರ್ಥ್ಯದ ವಾಟರ್ ಟ್ಯಾಂಕರ್ ಬಾಡಿಗೆ ಪಡೆದರೆ ಪ್ರತಿ ದಿನಕ್ಕೆ 7,100 ರೂಪಾಯಿಗಳನ್ನು ಪಾವತಿಸಬೇಕಿದೆ.


ಇನ್ನು, 6 ಸಾವಿರ ಲೀಟರ್ ನೀರನ್ನು ತೆಗೆದುಕೊಂಡರೆ 600 ರಿಂದ 750 ರೂ. ಇದೆ. 8 ಸಾವಿರ ಲೀಟರ್ ನೀರಿಗೆ 700 ರಿಂದ 850 ರೂ. ನಿಗದಿಪಡಿಸಲಾಗಿದೆ. 12 ಸಾವಿರ ಲೀಟರ್ ನೀರಿಗೆ 1,000 ದಿಂದ 1,200 ರೂ. ದರವನ್ನು ನಿಗದಿಪಡಿಸಲಾಗಿದೆ. ತಿಂಗಳ ಬಾಡಿಗೆ ಒಪ್ಪಿಕೊಳ್ಳುವವರಿಗೆ 5 ಕಿ.ಮೀಟರ್ ಗೆ 510 ರೂ ಮತ್ತು 10 ಕಿಲೋ ಮೀಟರ್ ದೂರ ಹೋದರೆ 650 ರೂ. ದರ ನಿಗದಿ ಮಾಡಲಾಗಿದೆ.
ನಿಯಮ ಉಲ್ಲಂಘಿಸಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.



Join Whatsapp