Home ಕರಾವಳಿ ಸುರತ್ಕಲ್ ಟೋಲ್ ತೆರವಿಗೆ ಆದೇಶ ನೀಡಿದ ಜಿಲ್ಲಾಡಳಿತ: ಡಿಸೆಂಬರ್ 1ರಿಂದ ಅನಿರ್ದಿಷ್ಟಾವಧಿ ಹೋರಾಟ ಕೈಬಿಡಲು ನಿರ್ಧಾರ

ಸುರತ್ಕಲ್ ಟೋಲ್ ತೆರವಿಗೆ ಆದೇಶ ನೀಡಿದ ಜಿಲ್ಲಾಡಳಿತ: ಡಿಸೆಂಬರ್ 1ರಿಂದ ಅನಿರ್ದಿಷ್ಟಾವಧಿ ಹೋರಾಟ ಕೈಬಿಡಲು ನಿರ್ಧಾರ

ಮಂಗಳೂರು: ಅಕ್ರಮವಾಗಿ ನಿರ್ಮಿಸಲಾಗಿದ್ದ ಸುರತ್ಕಲ್ ಟೋಲ್’ಗೇಟ್ ಅನ್ನು ತೆರವುಗೊಳಿಸಲು ಜಿಲ್ಲಾಡಳಿತ ಆದೇಶ ನೀಡಿದ ಹಿನ್ನೆಲೆಯಲ್ಲಿ ಟೋಲ್’ಗೇಟ್ ತೆರವುಗೊಳಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಡಿಸೆಂಬರ್ 1ರಿಂದ ಕೈಬಿಡುವುದಾಗಿ ಟೋಲ್’ಗೇಟ್ ವಿರೋಧಿ ಹೋರಾಟ ಸಮಿತಿ ತಿಳಿಸಿದೆ.

ಅಲ್ಲದೆ ಹೆಜಮಾಡಿ ಟೋಲ್’ಗೇಟ್’ನಲ್ಲಿ ಹೆಚ್ಚುವರಿ ಶುಲ್ಕ ವಸೂಲಿಯನ್ನು ವಿರೋಧಿಸಿ ಡಿಸೆಂಬರ್ 2ರಿಂದ ಹೆಜಮಾಡಿಯಲ್ಲಿ ಹೋರಾಟ ಮುಂದುವರಿಸಲು ಈ ಸಮಿತಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

Join Whatsapp
Exit mobile version