Home ಟಾಪ್ ಸುದ್ದಿಗಳು ರಾಜಕೀಯ ಪಕ್ಷಗಳ ಕಳಂಕಿತ ಶಾಸಕರನ್ನು ವಜಾ ಮಾಡಬೇಕು : SDPI ಒತ್ತಾಯ

ರಾಜಕೀಯ ಪಕ್ಷಗಳ ಕಳಂಕಿತ ಶಾಸಕರನ್ನು ವಜಾ ಮಾಡಬೇಕು : SDPI ಒತ್ತಾಯ

ರಾಜ್ಯದಲ್ಲಿ ಶಾಸಕರು, ಮಂತ್ರಿಗಳು, ರಾಜಕೀಯ ಪಕ್ಷದ ಮುಖಂಡರುಗಳು ಮತ್ತು ಪದಾಧಿಕಾರಿಗಳ ಮೇಲೆ ಅಸಹ್ಯ ರೀತಿಯಲ್ಲಿ ಆರೋಪಗಳು ಕೇಳಿ ಬರುತ್ತಿವೆ. ಇಂತಹ ಆರೋಪಿತರನ್ನು ಎಲ್ಲಾ ರಾಜಕೀಯ ಪಕ್ಷಗಳು ಅವರ ಪ್ರಾಥಮಿಕ ಸದಸ್ಯತನದಿಂದ ವಜಾ ಮಾಡಬೇಕು ಎಂದು SDPI, ಬೆಂಗಳೂರಿನಲ್ಲಿರುವ ಹಮೀದ್ ಶಾ ಕಾಂಪ್ಲೆಕ್ಸ್ ನಲ್ಲಿ ನಡೆದ ಪಕ್ಷದ ರಾಜ್ಯ ಸಮಿತಿ ಸಭೆ ಸಭೆಯಲ್ಲಿ ಒತ್ತಾಯಿಸಿದೆ.

ರಾಜ್ಯದಲ್ಲಿ ಶಾಸಕರು, ಮಂತ್ರಿಗಳು, ರಾಜಕೀಯ ಪಕ್ಷದ ಮುಖಂಡರುಗಳು ಮತ್ತು ಪದಾಧಿಕಾರಿಗಳ ಮೇಲೆ ಅಸಹ್ಯ ರೀತಿಯಲ್ಲಿ ಆರೋಪಗಳು ಕೇಳಿ ಬರುತ್ತಿವೆ. ಅತ್ಯಾಚಾರ, ಭೂಕಬಳಿಕೆ, ಅಕ್ರಮ ವ್ಯವಹಾರ, ಕೋಮುವಾದಿ ಹೇಳಿಕೆ, ಶಾಂತಿಭಂಗ, ಮೊದಲಾದ ನೂರಾರು ಆರೋಪಗಳು ಆಗಾಗ ಬಹಿರಂಗಗೊಳ್ಳುತ್ತಿದೆ. ಇದು ನಾಡಿನ ಒಟ್ಟು ಘನತೆ ಗೌರವಕ್ಕೆ ಚ್ಯುತಿಯಾಗಿದೆ.ಇಂತಹ ಆರೋಪಿತರನ್ನು ಎಲ್ಲಾ ರಾಜಕೀಯ ಪಕ್ಷಗಳು ಅವರ ಪ್ರಾಥಮಿಕ ಸದಸ್ಯತನದಿಂದ ವಜಾ ಮಾಡಬೇಕು.ದೇಶಕ್ಕೆ ಮಾದರಿಯಾಗಬಲ್ಲ ನೈತಿಕವಾಗಿ ಉತ್ತಮ ಗುಣ ಸ್ವಭಾವದ ವ್ಯಕ್ತಿಗಳಿಗೆ ಮಾತ್ರ ರಾಜಕಾರಣ ಮಾಡಲು ಅವಕಾಶ ಕೊಡಬೇಕು. SDPI ಆರಂಭದಿಂದಲೂ ಇದೆ ನೀತಿ ಅನುಸರಿಸಿ ಪಕ್ಷದ ನಾಯಕತ್ವ, ಸದಸ್ಯತನ ನೀಡುತ್ತದೆ ಎಂದು ಹೇಳಿದೆ.

Join Whatsapp
Exit mobile version