ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಲೋಕಸಭೆ ವಸತಿ ಸಮಿತಿಯು ನೋಟಿಸ್ ಜಾರಿಗೊಳಿಸಿದ್ದು, ತಮ್ಮ ಸರ್ಕಾರಿ ಬಂಗಲೆಯನ್ನು ಎಪ್ರಿಲ್ 22 ರೊಳಗೆ ತೊರೆಯುವಂತೆ ಸೂಚಿಸಿದೆ.
ಸಂಸದ ಸ್ಥಾನ ಅನರ್ಹಗೊಂಡಿರುವ ಹಿನ್ನೆಲೆಯಲ್ಲಿ ತಮ್ಮ ತುಘಲಕ್ ಲೇನ್ ನಲ್ಲಿರುವ ಬಂಗಲೆಯನ್ನು ತೊರೆಯುವಂತೆ ಆದೇಶಿಸಲಾಗಿದೆ.
2004ರಲ್ಲಿ ರಾಹುಲ್ ಗಾಂಧಿ ಮೊದಲ ಬಾರಿಗೆ ಉತ್ತರ ಪ್ರದೇಶದ ಅಮೇಥಿಯಿಂದ ಸಂಸದರಾಗಿ ಆಯ್ಕೆಯಾಗಿದ್ದಾಗ ದೆಹಲಿಯ ಲುಟೇನ್ಸ್‌ನ ತುಘಲಕ್ ಲೇನ್‌ನ ನಂ.12 ವಸತಿಯನ್ನು ನೀಡಲಾಗಿತ್ತು.