ಕೊಪ್ಪಳ: ಒಂದೇ ವೃಂದಾವನಕ್ಕಾಗಿ ಎರಡು ಮಠಗಳ ಮಧ್ಯೆ ವಿವಾದವುಂಟಾದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಈ ವಿವಾದದ ಮಧ್ಯೆ ಇದೇ ತಿಂಗಳು ಎರಡೂ ಮಠಗಳ ವತಿಯಿಂದ ಅದ್ಧೂರಿ ಕಾರ್ಯಕ್ರಮಕ್ಕೆ ಸಿದ್ದತೆ ನಡೆಸಲಾಗಿದೆ.
ಕೊಪ್ಪಳ ಜಿಲ್ಲೆಯ ಆನೆಗೊಂದಿ ಬಳಿಯಲ್ಲಿ ಒಂಭತ್ತು ಯತಿಗಳ ವೃಂದಾವನಗಳಿವೆ. ಈ ವೃಂದಾವನಗಳು ಮಧ್ವಮತ ಆರಾಧಕರಾಗಿದ್ದು, ಮಠಗಳ ಮಧ್ಯೆ ವಿವಾದವಾಗಿ ಗಲಾಟೆಗಳು ನಡೆದಿವೆ. ಈ ಮಧ್ಯೆ ಇದೇ ತಿಂಗಳ ಜು.14 ರಿಂದ 20ರ ಮಧ್ಯೆ ಅದ್ಧೂರಿ ಕಾರ್ಯಕ್ರಮ ನಡೆಸಲು ಮುಂದಾಗಿದ್ದಾರೆ.
ಒಂದೇ ವೃಂದಾವನಕ್ಕೆ ಎರಡು ಮಠಗಳಿಂದ ಹಕ್ಕು ಸ್ವಾಮ್ಯಕ್ಕಾಗಿ ವಿವಾದ ಉಂಟಾಗಿ, ತಮಗೆ ಪ್ರತ್ಯೇಕವಾಗಿ ಆರಾಧನೆಗೆ ಅವಕಾಶ ನೀಡಬೇಕೆಂದು ಕೊಪ್ಪಳ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ. ಆದರೆ, ಈ ವಿವಾದದಿಂದಾಗಿ ಯಾವುದೇ ಕಾರ್ಯಕ್ರಮ ನಡೆಸದಂತೆ ಕೊಪ್ಪಳ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.