ದಿಶಾ ಸಾಲಿಯನ್ ಸಾವು ಆತ್ಮಹತ್ಯೆ; ತನಿಖೆಯಲ್ಲಿ ಯಾವುದೇ ಅಕ್ರಮವಿಲ್ಲ: ಹೈಕೋರ್ಟ್‌ಗೆ ಮುಂಬೈ ಪೊಲೀಸರ ಹೇಳಿಕೆ

- Advertisement -

ಮುಂಬೈ: ‘ಸೆಲೆಬ್ರಿಟಿಗಳ ಮಾಜಿ ವ್ಯವಸ್ಥಾಪಕಿಯಾಗಿದ್ದ ದಿಶಾ ಸಾಲಿಯಾನ್‌ ಸಾವು ಆತ್ಮಹತ್ಯೆಯಿಂದ ಸಂಭವಿಸಿದೆ. ಅವರ ಸಾವಿನಲ್ಲಿ ಯಾವುದೇ ದುಷ್ಕೃತ್ಯ ನಡೆದಿಲ್ಲ’ ಎಂದು ಮುಂಬೈ ಪೊಲೀಸರು ಹೈಕೋರ್ಟ್‌ಗೆ ವರದಿ ಸಲ್ಲಿಸಿದ್ದಾರೆ.

- Advertisement -

ಮಗಳು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟಿದ್ದಾರೆ ಎಂದು ದಿಶಾ ಸಾಲಿಯಾನ್‌ ಅವರ ತಂದೆ ಸತೀಶ್‌ ಸಾಲಿಯಾನ್‌ ಪುನರುಚ್ಚರಿಸಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್‌. ಗಡ್ಕರಿ ನೇತೃತ್ವದ ಪೀಠವು ವಿಚಾರಣೆಯನ್ನು ಜುಲೈ 16ಕ್ಕೆ ಮುಂದೂಡಿತು.

- Advertisement -

‘ದಿಶಾ ಸಾಲಿಯಾನ್‌ 2020ರ ಜೂನ್‌ 8ರಂದು ಮುಂಬೈನ ಮಾಲಾಡ್‌ ಪ್ರದೇಶದಲ್ಲಿರುವ ತಮ್ಮ ಫ್ಲ್ಯಾಟ್‌ನ 14ನೇ ಮಹಡಿಯ ಕಿಟಕಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ದೇಹದ ಮೇಲೆ ದೈಹಿಕ ಹಲ್ಲೆ ನಡೆದಿರುವ ಗುರುತುಗಳು ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಗಿಲ್ಲ. ತಮ್ಮ ಕುಟುಂಬದೊಂದಿಗಿನ ವ್ಯಾಜ್ಯದಿಂದಾಗಿ ಅವರು ವಿಪರೀತ ಮಾನಸಿಕ ಒತ್ತಡಕ್ಕೆ ಸಿಲುಕಿದ್ದರು’ ಎಂಬ ಅಂಶವೂ ಮುಂಬೈ ಪೊಲೀಸರು ಹೈಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿದೆ.

ಮಗಳ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ಶಿವಸೇನಾ ಶಾಸಕ ಆದಿತ್ಯ ಠಾಕ್ರೆ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು ಎಂದು ಸತೀಶ್‌ ಸಾಲಿಯಾನ್‌ ಒತ್ತಾಯಿಸಿದ್ದರು.

- Advertisement -


Must Read

Related Articles