Home ಟಾಪ್ ಸುದ್ದಿಗಳು ಭಾರತಕ್ಕೆ ಇಸ್ಲಾಮೋಫೋಬಿಯಾ ವಿರೋಧಿ ಕಾಯ್ದೆ ಅಗತ್ಯವಿದೆ: ರಾಜಕೀಯ ಮಾನವಶಾಸ್ತ್ರಜ್ಞ ಶರೀಬ್ ಅಲಿ

ಭಾರತಕ್ಕೆ ಇಸ್ಲಾಮೋಫೋಬಿಯಾ ವಿರೋಧಿ ಕಾಯ್ದೆ ಅಗತ್ಯವಿದೆ: ರಾಜಕೀಯ ಮಾನವಶಾಸ್ತ್ರಜ್ಞ ಶರೀಬ್ ಅಲಿ

ನವದೆಹಲಿ: ಭಾರತದಲ್ಲಿ ನಿರಂತರವಾಗಿ ನಡೆಯುತ್ತಿರುವ ಮುಸ್ಲಿಮ್ ವಿರೋಧಿ ಹಿಂಸಾಚಾರವನ್ನು ತಡೆಯುವ ನಿಟ್ಟಿನಲ್ಲಿ ಇಸ್ಲಾಮೋಫೋಬಿಯಾ ವಿರೋಧಿ ಕಾಯ್ದೆಯನ್ನು ಜಾರಿಗೊಳಿಸುವ ಅಗತ್ಯವಿದೆ ಎಂದು ರಾಜಕೀಯ ಮಾನವಶಾಸ್ತ್ರಜ್ಞ ಶರೀಬ್ ಅಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಎಸ್.ಸಿ/ ಎಸ್.ಟಿ ದೌರ್ಜನ್ಯ ತಡೆ ಕಾಯ್ದೆ ಮಾದರಿಯಲ್ಲೇ ಮುಸ್ಲಿಮ್ ವಿರೋಧಿ ಹಿಂಸಾಚಾರ ತಡೆ ಕಾಯ್ದೆ ಜಾರಿಗೊಳಿಸಲು ಯೋಜನೆ ರೂಪಿಸುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದರು.

ಅಮೆರಿಕ ಮತ್ತು ಯುರೋಪ್ ನಲ್ಲಿಯೂ ಮುಸ್ಲಿಮರು ಹೊರಗಿನ ಮತ್ತು ವಿದೇಶಿ ಶಕ್ತಿಗಳ ಭಯದಿಂದ ಜೀವಿಸುವಂತಾಗಿದೆ. ಆದರೆ ಇದಕ್ಕೆ ಭಿನ್ನವಾಗಿ ಭಾರತದಲ್ಲಿ ಹಿಂದುತ್ವ ಪರಿಕಲ್ಪನೆಯೊಂದಿಗೆ ರಾಜಕೀಯ ಲಾಭಕೋಸ್ಕರ ಭಾರತೀಯರೇ ಇಲ್ಲಿನ ಮುಸ್ಲಿಮರನ್ನು ಹೊರಗಿನವರಂತೆ ನಡೆಸಿಕೊಳ್ಳುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿ ಮುಸ್ಲಿಮರ ವಿರುದ್ಧ ನಿರಂತರ ದಾಳಿ ನಡೆಸಲಾಗುತ್ತಿವೆ. ಆದ್ದರಿಂದ ಮುಸ್ಲಿಮರ ವಿರುದ್ಧ ದ್ವೇಷ ಮತ್ತು ಹಿಂಸಾಚಾರವನ್ನು ತಡೆಯುವ ನಿಟ್ಟಿನಲ್ಲಿ ಕಾನೂನು ಜಾರಿಗೊಳಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.

ಭಾರತದಲ್ಲಿ 2014 ರಿಂದ ಮುಸ್ಲಿಮ್ ವಿರೋಧಿ ಹಿಂಸಾಚಾರ ಹೆಚ್ಚಾಗಿದೆ. ಇದನ್ನು ತಡೆಗಟ್ಟುವ ಸಲುವಾಗಿ ಎಸ್.ಸಿ / ಎಸ್.ಟಿ ದೌರ್ಜನ್ಯ ತಡೆ ಕಾಯ್ದೆ ಮಾದರಿಯಲ್ಲೇ, ಮುಸ್ಲಿಮ್ ವಿರುದ್ಧದ ಎಲ್ಲಾ ರೀತಿಯ ದ್ವೇಷ ಮತ್ತು ಹಿಂಸಾಚಾರವನ್ನು ಕಾನೂನು ರೀತಿಯಲ್ಲಿ ಶಿಕ್ಷಿಸುವುದು ಅತ್ಯಗತ್ಯ ಎಂದು ಶರೀಬ್ ತಿಳಿಸಿದರು.

ಮಾತ್ರವಲ್ಲ, ಅಂತರಾಷ್ಟ್ರೀಯ ಇಸ್ಲಾಮೋಫೋಬಿಯಾ ತಡೆ ಕಾಯ್ದೆಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ಸುಪ್ರೀಮ್ ಕೋರ್ಟ್ ನ ಹಿರಿಯ ವಕೀಲರಾದ ಎಂ. ಆರ್. ಶಂಶಾದ್ ಅವರು ಅಸ್ತಿತ್ವದಲ್ಲಿರುವ ಕಾನೂನುಗಳ ವಿವೇಚನಾರಹಿತ ಅನ್ವಯದ ಬಗ್ಗೆ ಮಾತನಾಡಿದರು.

ಜಾಗತಿಕವಾಗಿ ವೃದ್ಧಿಸುತ್ತಿರುವ ಇಸ್ಲಾಮೋಫೋಬಿಯಾ ಮತ್ತು ಮುಸ್ಲಿಮ್ ವಿರೋಧಿ ಹಿಂಸಾಚಾರ ಕಾರಣಕ್ಕಾಗಿ 2021 ರ ಅಕ್ಟೋಬರ್ ನಲ್ಲಿ ಅಮೆರಿಕದ ಪ್ರತಿನಿಧಿ ಸದನದಲ್ಲಿ ಸಂಸದೆ ಇಲ್ಹಾನ್ ಉಮರ್ ಮತ್ತು ಇತರ 30 ಸಂಸದರು ಇಸ್ಲಾಮೋಫೋಬಿಯಾ ವಿರೋಧಿ ತಡೆ ಕಾಯ್ದೆಯನ್ನು ಮಂಡಿಸಿರುವುದು ಒಂದು ನಿರ್ಣಾಯಕ ಹೆಜ್ಜೆಯಾಗಿದೆ.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News

Join Whatsapp
Exit mobile version