Home ಟಾಪ್ ಸುದ್ದಿಗಳು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ದೀಪಂಕರ್ ದತ್ತಾ ಪ್ರಮಾಣ ವಚನ ಸ್ವೀಕಾರ

ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ದೀಪಂಕರ್ ದತ್ತಾ ಪ್ರಮಾಣ ವಚನ ಸ್ವೀಕಾರ

ನವದೆಹಲಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಸೋಮವಾರ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಇದರೊಂದಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ 28ಕ್ಕೆ ಏರಿಕೆಯಾದಂತಾಗಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಪ್ರಮಾಣವಚನ ಬೋಧಿಸಿದರು.  57 ವರ್ಷ ಪ್ರಾಯದ ನ್ಯಾಯಮೂರ್ತಿ ದತ್ತಾ ಅವರು ಫೆಬ್ರವರಿ 2030 ರಲ್ಲಿ ನಿವೃತ್ತರಾಗುವವರೆಗೆ ಸುಪ್ರೀಂ ಕೋರ್ಟ್’ನಲ್ಲಿ ಸುಮಾರು ಎಂಟು ವರ್ಷಗಳ ಅಧಿಕಾರಾವಧಿಯನ್ನು ಹೊಂದಿದ್ದಾರೆ.

ಮಾಜಿ ಸಿಜೆಐ ಯು.ಯು.ಲಲಿತ್ ನೇತೃತ್ವದ ಸುಪ್ರೀಂಕೋರ್ಟ್  ಕೊಲಿಜಿಯಂ ಸೆಪ್ಟಂಬರ್ 26ರಂದು ದೀಪಂಕರ್ ದತ್ತಾ ಅವರ ಹೆಸರನ್ನು ಬಡ್ತಿಗೆ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

Join Whatsapp
Exit mobile version