November 12, 2020
ಟಿಎಂಸಿ ಕಾರ್ಯಕರ್ತರ ಕೈ, ಕಾಲು ಮುರಿಯಬೇಕಾದೀತು ಎಂದಿದ್ದ ಪ.ಬಂ. ಬಿಜೆಪಿ ಅಧ್ಯಕ್ಷನ ಮೇಲೆಯೇ ದಾಳಿ

ಕೊಲ್ಕತಾ : ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಕೈಕಾಲು ಮುರಿಯಬೇಕಾದೀತು, ಹತ್ಯೆಯೂ ನಡೆದೀತು ಎಂದು ಬೆದರಿಕೆಯೊಡ್ಡಿದ್ದ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಮೇಲೆಯೇ ಇಂದು ದಾಳಿ ನಡೆದಿದೆ.
ದಿಲೀಪ್ ಘೋಷ್ ಅವರ ಬೆಂಗಾಲು ವಾಹನದ ಮೇಲೆ ಪಶ್ಚಿಮ ಬಂಗಾಳದ ಅಲಿಪುರ್ದುವಾರ್ ಜಿಲ್ಲೆಯಲ್ಲಿ ಪ್ರತಿಭಟನಕಾರರ ಗುಂಪೊಂದು ದಾಳಿ ನಡೆಸಿದೆ. ಈ ವೇಳೆ ಪ್ರತಿಭಟನಕಾರರು ಕಪ್ಪು ಧ್ವಜ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾಳಿಯ ವೇಳೆ ಕಾಲ್ಚಿನಿ ಶಾಸಕ ವಿಲ್ಸನ್ ಚಂಪಾಮರಿ ಅವರಿದ್ದ ವಾಹನಕ್ಕೆ ಹಾನಿಯಾಗಿದೆ. ದಾಳಿಯ ಹಿಂದೆ ಯಾರಿದ್ದಾರೆ ಎಂಬುದು ಇಲ್ಲಿ ವರೆಗೆ ಪತ್ತೆಯಾಗಿಲ್ಲ.
ಪ್ರತಿಭಟನಕಾರರು ಕಪ್ಪು ಬಾವುಟ ಪ್ರದರ್ಶಿಸಿದರಲ್ಲದೆ, ‘ಗೋ ಬ್ಯಾಕ್ (ಹಿಂದಕ್ಕೆ ಹೋಗಿ)’ ಘೋಷಣೆಗಳು ಮೊಳಗಿದವು ಎಂದು ‘ಎಎನ್ ಐ’ ವರದಿ ಮಾಡಿದೆ.
ಫೋಟೊ ಕೃಪೆ : ANI