ಮಾಜಿ ಕೇಂದ್ರ ಸಚಿವ ದಿಲೀಪ್ ರೇಗೆ ನೀಡಿದ ಜೈಲು ಶಿಕ್ಷೆಯನ್ನು ಅಮಾನತುಗೊಳಿಸಿದ ಹೈಕೋರ್ಟ್

Prasthutha|

1999ರಲ್ಲಿ ಜಾರ್ಖಂಡ್ ಕಲ್ಲಿದ್ದಲು ಬ್ಲಾಕ್ ಗಳ ವಿತರಣೆಯಲ್ಲಾದ ಅವ್ಯವಸ್ಥೆ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ದಿಲೀಪ್ ರೇ ಗೆ ನೀಡಿದ್ದ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ದಿಲ್ಲಿ ಹೈಕೋರ್ಟ್ ಮಂಗಳವಾರ ಅಮಾನತುಗೊಳಿಸಿದೆ. ತನಗೆ ಶಿಕ್ಷೆ ವಿಧಿಸಿರುವುದರ ವಿರುದ್ಧ ರೇ ಸಲ್ಲಿಸಿದ ಮೇಲ್ಮನವಿಗೆ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಸಿಬಿಐಗೆ ನೊಟೀಸು ನೀಡಿದ್ದಾರೆ.

ಅವರ ಮೇಲ್ಮನವಿಯನ್ನು ನ್ಯಾಯಾಲಯ ಪರಿಗಣಿಸಿದ್ದು, ನವೆಂಬರ್ 25ಕ್ಕೆ ಪ್ರಕರಣದ ವಿಚಾರಣೆಯನ್ನು ನಿಗದಿಪಡಿಸಿದೆ ಎಂದು ಪಿಟಿಐ ವರದಿ ಮಾಡಿದೆ.

- Advertisement -

ಅಟಲ್ ಬಿಹಾರ್ ವಾಜಪೇಯಿ ಸರಕಾರದಲ್ಲಿ ಕಲ್ಲಿದ್ದಲು ರಾಜ್ಯ ಸಚಿವಾರಾಗಿದ್ದ ದಿಲೀಪ್ ರೇ ಯನ್ನು ಕಳೆದ ತಿಂಗಳು ಪ್ರಕ್ರಣದಲ್ಲಿ ದೋಷಿಯೆಂದು ಘೋಷಿಸಲಾಗಿತ್ತು. ಅವರಿಗೆ ಮತ್ತು ಇತರ ಇಬ್ಬರು ದೋಷಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಮತ್ತು ಆ ಮೂಲಕ ಸಮಾಜಕ್ಕೆ ಸಂದೇಶವನ್ನು ನೀಡಬೇಕೆಂದು ಸಿಬಿಐ ವಾದಿಸಿತ್ತು.

ತಮ್ಮ ವೃದ್ಧಾಪ್ಯದ ಕಾರಣಕ್ಕಾಗಿ ನ್ಯಾಯಾಲಯವು ಮೃದುನೀತಿಯನ್ನು ತಾಳಬೇಕು ದೋಷಿಗಳು ನ್ಯಾಯಾಲಯವನ್ನು ಒತ್ತಾಯಿಸಿದ್ದರು.

ಆ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳಾಗಿದ್ದ ಪ್ರದೀಪ್ ಕುಮಾರ್ ಮತ್ತು ನಿತ್ಯಾನಂದ್ ಗೌತಮ್ ರಿಗೆ ನ್ಯಾಯಾಲಯ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಇಬ್ಬರೂ 80ರ ಹರೆಯದವರಾಗಿದ್ದಾರೆ. ಕ್ಯಾಸ್ಟ್ರನ್ ಟೆಕ್ನಾಲಜಿ ಲಿಮಿಟೆಡ್ (ಸಿಟಿಎಲ್) ನ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಕುಮಾರ್ ಅಗರ್ವಲ್ಲಾರಿಗೂ ಅಷ್ಟೇ ಪ್ರಮಾಣದ ಜೈಲು ಶಿಕ್ಷೆಯನ್ನು ನ್ಯಾಯಾಲಯ ಘೋಷಿಸಿತ್ತು.

- Advertisement -