Home ಟಾಪ್ ಸುದ್ದಿಗಳು ಡಿಜಿಟಲ್ ಲಾಕ್ಡೌನ್ : ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಿಸಲು ಮಹಾರಾಷ್ಟ್ರದ ಗ್ರಾಮಸ್ಥರ ನಿರ್ಣಯ

ಡಿಜಿಟಲ್ ಲಾಕ್ಡೌನ್ : ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಿಸಲು ಮಹಾರಾಷ್ಟ್ರದ ಗ್ರಾಮಸ್ಥರ ನಿರ್ಣಯ

ಸಾಂಗ್ಲಿ: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕಾಡೇಗಾಂವ್ ತಾಲ್ಲೂಕಿನ ಮೋಹಿತೆ ವಡಗಾಂವ ಗ್ರಾಮಸ್ಥರು ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರತಂದು, ಕಲಿಕೆಯಲ್ಲಿ ಆಸಕ್ತಿ ಹೆಚ್ಚಿಸಲು ‘ಡಿಜಿಟಲ್ ಲಾಕ್ಡೌನ್’ ಘೋಷಿಸಿದ್ದಾರೆ.

ನಿತ್ಯ ಸಂಜೆ 7ರಿಂದ 8.30ರವರೆಗೆ ಒಂದೂವರೆ ತಾಸು ಮೊಬೈಲ್, ಟಿ.ವಿ ಬಳಕೆ ನಿಷೇಧಿಸಲಾಗಿದೆ. ಈ ಪದ್ದತಿಯು ಆ.14 ರಿಂದ ಜಾರಿಯಾಗಿದೆ. ಇದರಿಂದ ಸಂಜೆ ಹೊತ್ತಿನಲ್ಲಿ ಮಕ್ಕಳು ಮೊಬೈಲ್ ಬಳಸದೆ ಕಲಿಕೆಯಲ್ಲಿ ಆಸಕ್ತಿ ಹೆಚ್ಚಿಸಿದ್ದಾರೆ. 

ಮಕ್ಕಳು ಕಲಿಯುವುದರಲ್ಲಿ ತುಂಬಾ ಹಿಂದುಳಿದಿದ್ದು, ಮೊಬೈಲ್ ಗೀಳಿಗೆ ಬಲಿಯಾಗಿದ್ದಾರೆ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಿದ್ದರು. ಆ ಗ್ರಾಮದಲ್ಲಿ ಸುಮಾರು 3 ಸಾವಿರದಷ್ಟು ಜನಸಂಖ್ಯೆ ಇದೆ. 1ರಿಂದ 10ನೇ ತರಗತಿಯವರೆ ಸುಮಾರು 450 ಮಕ್ಕಳು ಕಲಿಯುತ್ತಿದ್ದಾರೆ. ಹೀಗಾಗಿ ಗ್ರಾಮದ ಹಿರಿಯರೆಲ್ಲ ಸೇರಿ ಚರ್ಚಿಸಿ, ಗ್ರಾಮ ಪಂಚಾಯಿತಿ ಸಭೆ ಕರೆದು ನಿತ್ಯ ಒಂದೂವರೆ ತಾಸು ಮೊಬೈಲ್, ಟಿ.ವಿ ಬಳಕೆ ನಿಷೇಧಿಸುವಂತಹ ನಿರ್ಣಯವನ್ನು ಗ್ರಾಮ ಪಂಚಾಯಿತಿ ಸಭೆಯಲ್ಲಿ ಕೈಗೊಂಡರು. ಜೊತೆಗೆ ವಾರ್ಡ್ವಾರು ಸಮಿತಿ ರಚಿಸಿ, ಜನರಲ್ಲಿ ಜಾಗೃತಿ ಮೂಡಿಸಿದೆವು’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹೇಳಿದರು.

‘ಗ್ರಾಮದೇವರಾದ ಭೈರವನಾಥ ಮಂದಿರದ ಮೇಲೆ ಸೈರನ್ ಅಳವಡಿಸಲಾಗಿದೆ. ಸಂಜೆ 7ಕ್ಕೆ ಸೈರನ್ ಮೊಳಗಿದ ಕೂಡಲೇ ಜನರು ಮನೆಯಲ್ಲಿ ಮೊಬೈಲ್ ಮತ್ತು ಟಿ.ವಿ ಬಳಸುವುದನ್ನು ನಿಲ್ಲಿಸಿ ಮಕ್ಕಳೆಲ್ಲ ಕಲಿಕೆಯಲ್ಲಿ ತೊಡಗುತ್ತಾರೆ. ಎರಡು ತಿಂಗಳಿಂದ ಇದನ್ನು ಅನುಸರಿಸುತ್ತಿರುವುದರಿಂದ ಮಕ್ಕಳ ಕಲಿಕೆಯಲ್ಲಿ ಸುಧಾರಣೆ ಕಂಡುಬಂದಿದೆ’ ಎಂದು ಅಭಿಪ್ರಾಯಪಟ್ಟರು.

Join Whatsapp
Exit mobile version