Home ಟಾಪ್ ಸುದ್ದಿಗಳು ಡಿಪೋದಲ್ಲಿ ನಿಲ್ಲಿಸಿದ್ದ ಬಿಎಂಟಿಸಿ ಬಸ್’ಗಳಿಂದ ಡೀಸೆಲ್ ಕಳವು

ಡಿಪೋದಲ್ಲಿ ನಿಲ್ಲಿಸಿದ್ದ ಬಿಎಂಟಿಸಿ ಬಸ್’ಗಳಿಂದ ಡೀಸೆಲ್ ಕಳವು

ಬೆಂಗಳೂರು: ಯಲಹಂಕ ಉಪನಗರದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಡಿಪೋದಲ್ಲಿ ನಿಲ್ಲಿಸಿದ್ದ ಎರಡು ಬಸ್’ಗಳಿಂದ ಡೀಸೆಲ್ ಕಳವು ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.


ಎರಡು ಬಿಎಂಟಿಸಿ ಬಸ್’ಗಳಿಂದ 14 ಸಾವಿರ ರೂ. ಮೌಲ್ಯದ 167 ಲೀಟರ್ ಡೀಸೆಲ್ ಅನ್ನು ಕಳ್ಳರು ಕಳೆದ ಫೆ.18 ರ ರಾತ್ರಿ ಕಳ್ಳತನ ಮಾಡಿದ್ದು ಕೃತ್ಯವು ತಡವಾಗಿ ಬೆಳಕಿಗೆ ಬಂದಿದೆ.


ಕಳ್ಳತನದ ಬಗ್ಗೆ ಪುಟ್ಟೇನಹಳ್ಳಿ ಡಿಪೋ ಉಸ್ತುವಾರಿ ರಮೇಶ್ ಬಿ. ಎಚ್. ಮಾತನಾಡಿ. ನಾನು ರಾತ್ರಿ ಪಾಳಯದಲ್ಲಿ ಕೆಲಸ ಮಾಡುವಾಗ ಎರಡು ಬಸ್’ಗಳ ಕೆಳಗೆ ಡೀಸೆಲ್ ಸೋರಿಕೆಯಾಗುತ್ತಿರುವುದು ಕಂಡು ಬಂತು. ಪರಿಶೀಲಿಸಿದಾಗ ನೆಲೆದ ಮೇಲೆ ಮತ್ತು ಕಂಪೌಂಡ್ ಮೇಲೆ ಡೀಸೆಲ್ ಸೋರಿಕೆಯಾಗಿರುವುದು ಕಂಡು, ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿದೆ ಎಂದು ಹೇಳಿದ್ದಾರೆ. ರಮೇಶ್ ದೂರಿನಲ್ಲಿ ಕಳ್ಳರು ಡಿಪೋ ಕಾಂಪೌಂಡ್ ಜಿಗಿದು ಬಂದು ಕಳ್ಳತನ ಮಾಡಿ ಮತ್ತೆ ಅದೇ ಕಂಪೌಂಡ್ ಹಾರಿ ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

Join Whatsapp
Exit mobile version