Home ಟಾಪ್ ಸುದ್ದಿಗಳು ಪೊಲೀಸರಿಗೆ ಕೇಸರಿ ಸಮವಸ್ತ್ರ ಹಾಕಿಸಿದ್ದನ್ನ ಮರೆತುಬಿಟ್ರಾ: ಅಶೋಕ್ ಗೆ ಡಿಕೆಶಿ ಪ್ರಶ್ನೆ

ಪೊಲೀಸರಿಗೆ ಕೇಸರಿ ಸಮವಸ್ತ್ರ ಹಾಕಿಸಿದ್ದನ್ನ ಮರೆತುಬಿಟ್ರಾ: ಅಶೋಕ್ ಗೆ ಡಿಕೆಶಿ ಪ್ರಶ್ನೆ

ರಾಮನಗರ: ಹಬ್ಬಗಳ ಸಂದರ್ಭದಲ್ಲಿ ಪೊಲೀಸ್ ಠಾಣೆಯಲ್ಲೇ ಅಧಿಕಾರಿಗಳ ಸಮವಸ್ತ್ರದ ಬದಲು ಬಿಜೆಪಿಯ ಕೇಸರಿ ಸಮವಸ್ತ್ರ ಹಾಕಿಸಿದ್ದನ್ನು ಅಶೋಕ್ ಮರೆತುಬಿಟ್ಟಿದ್ದಾರಾ? ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.

ಕನಕಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೊಲೀಸ್ ಠಾಣೆಗೆ ರಕ್ಷಣೆ ನೀಡುವ ಪರಿಸ್ಥಿತಿ ಬಂದಿದೆ ಎಂಬ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಟೀಕೆಗೆ ತಿರುಗೇಟು ನೀಡಿದ್ದಾರೆ.
ಹಬ್ಬಗಳ ಸಂದರ್ಭದಲ್ಲಿ ಪೊಲೀಸ್ ಠಾಣೆಯಲ್ಲೇ ಅಧಿಕಾರಿಗಳ ಸಮವಸ್ತ್ರದ ಬದಲಿಗೆ ಬಿಜೆಪಿಯ ಕೇಸರಿ ಬಟ್ಟೆ ಹಾಕಿಸಿದ್ದನ್ನು ಅಶೋಕ್ ಮರೆತಿದ್ದಾರಾ? ಉಡುಪಿ, ಬಳ್ಳಾರಿಯಲ್ಲಿ ಪೊಲೀಸರಿಗೆ ಬಿಜೆಪಿಯ ಕೇಸರಿ ಸಮವಸ್ತ್ರ ಹಾಕಿಸಿದ್ರಿ. ನೀವು ನಮ್ಮ ಬಗ್ಗೆ ಮಾತ್ರಮಾಡ್ತಿರಾ? ಎಂದು ಪ್ರಶ್ನಿಸಿದ್ದಾರೆ.

Join Whatsapp
Exit mobile version