Home ಟಾಪ್ ಸುದ್ದಿಗಳು “ನಾನೇನು ಅವಳನ್ನು ರೇಪ್ ಮಾಡಿದೀನಾ”: ಅರವಿಂದ ಲಿಂಬಾವಳಿಯಿಂದ ಮತ್ತೊಂದು ವಿವಾದ

“ನಾನೇನು ಅವಳನ್ನು ರೇಪ್ ಮಾಡಿದೀನಾ”: ಅರವಿಂದ ಲಿಂಬಾವಳಿಯಿಂದ ಮತ್ತೊಂದು ವಿವಾದ

ಬೆಂಗಳೂರು: ಅಹವಾಲು ಹೇಳಿಕೊಳ್ಳಲು ಬಂದ ಮಹಿಳೆಯ ಮೇಲೆ ದರ್ಪ ತೋರಿದ ಶಾಸಕ ಅರವಿಂದ್ ಲಿಂಬಾವಳಿಯವರ ಮೇಲೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಅವರು ಮತ್ತೆ ತಮ್ಮ ಸಂಸ್ಕಾರದ ಮಟ್ಟವನ್ನು ತೋರಿಸಿದ್ದಾರೆ. ನಾನೇನು ಅವಳನ್ನು ರೇಪ್ ಮಾಡಿದ್ದೀನಾ ಎಂದು ಕೆಟ್ಟದಾಗಿ ಮಾತನಾಡಿದ್ದಾರೆ.


ಅರವಿಂದ ಲಿಂಬಾವಳಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಇರುವಾಗ ಪತ್ರಕರ್ತರು ವೈರಲ್ ಆದ ವೀಡಿಯೋದಲ್ಲಿ ಸೆರೆಯಾದ ಶಾಸಕರ ದರ್ಪದ ಬಗ್ಗೆ ಗಮನ ಸೆಳೆದಿದ್ದಾರೆ. ಆಗ ಲಿಂಬಾಳಿ , ನಿಮ್ಮನ್ನು ಮಹಿಳೆಯರ ಪರ ಮಾತನಾಡುವುದಕ್ಕೆ ಕರೆಸಿರೋದಾ, ಮಹಿಳೆಗೆ ಹಾಗೆ ಮಾಡಿದ್ರಿ ಅಂತೀರಿ, ನಾನೇನು ರೇಪ್ ಮಾಡಿದ್ದೀನಾ ಎಂದು ಕೆಟ್ಟದಾಗಿ ಪತ್ರಕರ್ತರನ್ನು ದಬಾಯಿಸಿದ್ದಾರೆ. ಒಂದು ಮಹಿಳೆಯೊಂದಿಗೆ ದರ್ಪದಿಂದ ನಡೆದುಕೊಂಡ ಶಾಸಕರು ಆ ಬಗ್ಗೆ ಕೇಳಿದಾಗ ಆ ಮಹಿಳೆಯ ಬಗ್ಗೆ ಮತ್ತೂ ಕೆಟ್ಟದಾಗಿ ಪ್ರತಿಕ್ರಿಯಿಸಿದ್ದು ಬಿಜೆಪಿ ಶಾಸಕನ ಸಂಸ್ಕಾರವನ್ನು ತಿಳಿಸಿದೆ ಎಂದು ಜನರು ಹೇಳುತ್ತಿದ್ದಾರೆ.

Join Whatsapp
Exit mobile version