Home ಟಾಪ್ ಸುದ್ದಿಗಳು ಖ್ಯಾತ ಯೂಟ್ಯೂಬರ್ ಧ್ರುವ ರಾಠಿಯನ್ನು ವರಿಸಿದ ಜರ್ಮನ್ ಪ್ರಜೆ ಜೂಲಿಯೊ

ಖ್ಯಾತ ಯೂಟ್ಯೂಬರ್ ಧ್ರುವ ರಾಠಿಯನ್ನು ವರಿಸಿದ ಜರ್ಮನ್ ಪ್ರಜೆ ಜೂಲಿಯೊ


ಜರ್ಮನಿ: ಖ್ಯಾತ ಯೂಟ್ಯೂಬರ್ , ವಿಶ್ಲೇಷಕ ಧ್ರುವ ರಾಠಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ದೀರ್ಘಕಾಲದ ಜರ್ಮನಿಯ ಪ್ರಿಯತಮೆ ಜೂಲಿಯೊಂದಿಗೆ ಧ್ರುವ ರಾಠಿ ತನ್ನ ವೈವಾಹಿಕ ಜೀವನಕ್ಕೆ ಪಾದಾರ್ಪಣೆಗೈದಿದ್ದಾರೆ.


ಯೂಟ್ಯೂಬ್ ಮೂಲಕ ವಿವಾಹದ ಕುರಿತ ಮಾಹಿತಿ ಹಂಚಿರುವ ಅವರು ಅಂತಿಮವಾಗಿ ನಾವು 7 ವರ್ಷಗಳ ಬಳಿಕ ನಮ್ಮ ಸ್ನೇಹಿತರು ಮತ್ತು ಕೆಲವೇ ಕೆಲವು ಕುಟುಂಬಿಕರ ಸಮ್ಮುಖದಲ್ಲಿ ಸರಳ ರೀತಿಯಲ್ಲಿ ವಿವಾಹವಾಗಿದ್ದೇವೆ ಎಂದಿದ್ದಾರೆ. ಮದುವೆ ನಮ್ಮ ಜೀವನದಲ್ಲಿ ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳುವ ಅದ್ಭುತ ದಿನವಾಗಿದ್ದು, ಎಲ್ಲರನ್ನೂ ಆಮಂತ್ರಿಸದಿದ್ದಕ್ಕೆ ಕ್ಷಮೆಯನ್ನೂ ಕೋರಿದ್ದಾರೆ.


ಸುಮಾರು 6.28M ನಷ್ಟು ಸಬ್ ಸ್ಕ್ರೈ ಬರ್ಸ್ ಅನ್ನು ಯೂಟ್ಯೂಬ್ ನಲ್ಲಿ ಹೊಂದಿರುವ ಧ್ರುವ್ ರಾಠಿ ದೇಶದ ಪ್ರಚಲಿತ ವಿದ್ಯಾಮಾನಗಳ ವಿಶ್ಲೇಷಣೆ ಮಾಡುವ ಮೂಲಕ ಬಹಳ ಖ್ಯಾತಿಹೊಂದಿದ್ದಾರೆ.

Join Whatsapp
Exit mobile version