Home ಟಾಪ್ ಸುದ್ದಿಗಳು ಧೋನಿ ಮನೆಯಲ್ಲೂ ವಿದ್ಯುತ್ ಸಮಸ್ಯೆ: ತೆರಿಗೆ ಪಾವತಿಸಿಯೂ ಹೀಗೇಕೆ ಎಂದು ಪ್ರಶ್ನಿಸಿದ ಪತ್ನಿ !

ಧೋನಿ ಮನೆಯಲ್ಲೂ ವಿದ್ಯುತ್ ಸಮಸ್ಯೆ: ತೆರಿಗೆ ಪಾವತಿಸಿಯೂ ಹೀಗೇಕೆ ಎಂದು ಪ್ರಶ್ನಿಸಿದ ಪತ್ನಿ !

ರಾಂಚಿ: ವಿದ್ಯುತ್ ಸಮಸ್ಯೆ ಕೇವಲ ದೇಶದ ಬಡಜನರನ್ನು ಕಾಡುತ್ತಿಲ್ಲ, ಬದಲಾಗಿ ಶ್ರೀಮಂತರನ್ನೂ ಕಾಡುತ್ತಿದೆ. ಟೀಂ ಇಂಡಿಯಾ ಮಾಜಿ ಕಪ್ತಾನ ಮಹೇಂದ್ರ ಸಿಂಗ್ ಧೋನಿ ರಾಂಚಿಯಲ್ಲಿರುವ ಮನೆಯಲ್ಲೂ ವಿದ್ಯುತ್ ಸಮಸ್ಯೆ ಇದೆಯಂತೆ. ಈ ಬಗ್ಗೆ ಸ್ವತಃ ಧೋನಿ ಪತ್ನಿಯೇ ದೂರಿಕೊಂಡಿದ್ದು ಜಾರ್ಖಂಡ್ ಸರಕಾರದ ಪ್ರತಿದಿನದ ಲೋಡ್ ಶೆಡ್ಡಿಂಗ್ ಗೆ ಸಾಕ್ಷಿ ಧೋನಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಟ್ವೀಟ್ ಮೂಲಕ ಜಾರ್ಖಂಡ್ ಸರಕಾರವನ್ನು ಪ್ರಶ್ನಸಿರುವ ಸಾಕ್ಷಿ, ಇಷ್ಟು ವರ್ಷಗಳಿಂದ ಜಾರ್ಖಂಡ್‌ನಲ್ಲಿ ವಿದ್ಯುತ್ ಸಮಸ್ಯೆ ಏಕೆ ಇದೆ ಎಂದು ತಿಳಿಯುತ್ತಿಲ್ಲ, ಜಾರ್ಖಂಡ್‌ನ ತೆರಿಗೆ ಪಾವತಿದಾಳಾಗಿರುವ ನನಗೆ ವಿದ್ಯುತ್ ಸಮಸ್ಯೆಯಿಂದ ತೊಂದರೆಯಾಗುತ್ತಿದೆ. ಜಾರ್ಖಂಡ್‌ನಲ್ಲಿ ಇಷ್ಟು ವರ್ಷಗಳಿಂದ ವಿದ್ಯುತ್ ಸಮಸ್ಯೆ ಏಕೆ ಇದೆ ಎಂದು ತಿಳಿಯಲು ನಾನು ಬಯಸುತ್ತೇನೆ ಎಂದಿದ್ದಾರೆ.

ವಿದ್ಯುತ್ ಅನ್ನು ನಾನು ಮನೆಯಲ್ಲಿ ಅನಗತ್ಯವಾಗಿ ಬಳಸದೇ, ಪ್ರಜ್ಞಾ ಪೂರ್ವಕವಾಗಿ ಉಳಿಸುತ್ತೇನೆ. ಆದರೂ ನಮಗೇಕೆ ಈ ತೊಂದರೆ ಎಂದು ಪ್ರಶ್ನಿಸಿದ್ದಾರೆ. ಜಾರ್ಖಂಡ್‌ನಲ್ಲಿ ವಿದ್ಯುತ್ ಕಡಿತದ ಸಮಸ್ಯೆ ನಿರಂತರವಾಗಿ ಕಂಡು ಬರುತ್ತಿದ್ದು, ಇದರಿಂದ ರಾಜ್ಯದ ಹಲವು ಜಿಲ್ಲೆಗಳಿಗೆ ನಿರಂತರ ವಿದ್ಯುತ್ ಪೂರೈಕೆಯಾಗುತ್ತಿಲ್ಲ.

Join Whatsapp
Exit mobile version