Home ಟಾಪ್ ಸುದ್ದಿಗಳು ಮುಸ್ಲಿಂ ವೇಷದಲ್ಲಿ ಅಯೋಧ್ಯೆಯ ಹಿಂದೂಗಳನ್ನು ಟೀಕಿಸಿದ ಧೀರೇಂದ್ರ ರಾಘವ್ ಬಂಧನ

ಮುಸ್ಲಿಂ ವೇಷದಲ್ಲಿ ಅಯೋಧ್ಯೆಯ ಹಿಂದೂಗಳನ್ನು ಟೀಕಿಸಿದ ಧೀರೇಂದ್ರ ರಾಘವ್ ಬಂಧನ

ಲಕ್ನೋ: ತನ್ನನ್ನು ಮುಸ್ಲಿಂ ಎಂದು ಬಿಂಬಿಸಿ ಅಯೋಧ್ಯೆಯ ಹಿಂದೂಗಳನ್ನು ಟೀಕಿಸಿದ ಧೀರೇಂದ್ರ ರಾಘವ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮುಸ್ಲಿಂ ವ್ಯಕ್ತಿ ಎಂದು ತನ್ನನ್ನು ಹೇಳಿಕೊಂಡ ವ್ಯಕ್ತಿ ಅಯೋಧ್ಯೆಯ ಹಿಂದೂಗಳನ್ನು ಎರಡು ಮುಖದವರು ಎಂದು ಕರೆದು, ರಾಹುಲ್‍ಗಾಂಧಿ ಅಧಿಕಾರಕ್ಕೆ ಬಂದಿದ್ದರೆ ಮುಸ್ಲಿಮರಿಗೆ ಮೀಸಲಾತಿ ನೀಡುತ್ತಿದ್ದರು ಎಂದು ವಿಡಿಯೋದಲ್ಲಿ ಹೇಳಿದ್ದನು. ಒಬ್ಬ ನಾಯಕ ನಮಗೆ ಮಸೀದಿ ನಿರ್ಮಿಸಿದರೆ, ನಾವು ನಮ್ಮ ಜೀವನವಿಡೀ ಆತನಿಗೆ ಮತ ಹಾಕುತ್ತೇವೆ. ಆದರೆ ನಿಮಗೆ ಎಲ್ಲವನ್ನೂ ಮಾಡಿದ್ದರೂ ನೀವು ಮೋದಿಗೆ ಮತ ಹಾಕುವುದಿಲ್ಲ ಎಂದೂ ಆತ ಹೇಳಿದ್ದನು ಈ ವಿಡಿಯೋ ವೈರಲ್ ಆಗಿತ್ತು. ಹಲವರು ಇದನ್ನು ಹಂಚಿಕೊಂಡಿದ್ದರು. ಕೋಮು ಪ್ರಚೋದನೆಗೆ ಇದು ಬಳಕೆಯಾಗಿತ್ತು.

ವಿಡಿಯೊದಲ್ಲಿರುವ ವ್ಯಕ್ತಿ ಮುಸ್ಲಿಂ ಅಲ್ಲ, ಧೀರೇಂದ್ರ ರಾಘವ್ ಎಂಬಾತ ಎಂದು ತಿಳಿದು ಬಂದಿದೆ.

ಮುಸ್ಲಿಮರ ವೇಷ ಹಾಕಿ ಹಿಂದೂಗಳನ್ನು ಟೀಕಿಸಿ ಗಲಭೆ ಸೃಷ್ಟಿಸಲು ಯತ್ನಿಸಿದ ಧೀರೇಂದ್ರ ರಾಘವ್‌ ಪೊಲೀಸರ ಅತಿಥಿಯಾಗಿದ್ದಾನೆ. ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಪ್ರಚೋದಿಸುವ ಉದ್ದೇಶದಿಂದ ಮುಸ್ಲಿಮರ ವೇಷ ಹಾಕಿ ಈ ವಿಡಿಯೋ ತಯಾರಿಸಿದ್ದೆಂದು ಹೇಳಲಾಗಿದೆ.

Join Whatsapp
Exit mobile version