ಧರ್ಮಸ್ಥಳ | ನಾಪತ್ತೆಯಾಗಿದ್ದ ಯುವತಿ ಶವವಾಗಿ ಪತ್ತೆ

Prasthutha|

- Advertisement -

ಧರ್ಮಸ್ಥಳ:  ನಾಪತ್ತೆಯಾಗಿದ್ದ 23 ವರ್ಷದ ಯುವತಿಯೊಬ್ಬಳ ಶವ  ಧರ್ಮಸ್ಥಳ ಠಾಣಾ ವ್ಯಾಪ್ತಿಯ ಕೋಲೋಡಿ ಅರಣ್ಯದಲ್ಲಿ ಪತ್ತೆಯಾಗಿದೆ. ನೆರಿಯ ಗ್ರಾಮದ ನಿವಾಸಿ ಮಂಜುನಾಥ ಮಲೆಕುಡಿಯಾ ಅವರ ಪುತ್ರಿ ತೇಜಸ್ವಿನಿ ಮೃತ ಯುವತಿಯಾಗಿದ್ದಾಳೆ. ಫೆಬ್ರವರಿ 22 ರಂದು ಆಕೆ ನಾಪತ್ತೆಯಾಗಿದ್ದು ವಿಷ ಸೇವನೆಯಿಂದ ಮೃತಪಟ್ಟಿದ್ದಾಳೆ ಎನ್ನಲಾಗಿದೆ.

ಮೃತ ಯುವತಿಯು ಉಜಿರೆಯ ಮನೆಯೊಂದರಲ್ಲಿ 4 ವರ್ಷಗಳಿಂದ ಕೆಲಸ ಮಾಡುತ್ತಿದ್ದಳು. ಮಧ್ಯಾಹ್ನದ ನಂತರ ಉಜಿರೆಯ ಕಂಪ್ಯೂಟರ್‌ ಕೇಂದ್ರದಲ್ಲಿ ಕಂಪ್ಯೂಟರ್‌‌ ಶಿಕ್ಷಣ ಪಡೆಯಲು ಕಳೆದ ನಾಲ್ಕು ತಿಂಗಳಿನಿಂದ ಹೋಗಿಬರುತ್ತಿದ್ದಳು.

- Advertisement -

ಫೆಬ್ರವರಿ 22 ರಂದು ಸಂಜೆ ಕಂಪ್ಯೂಟರ್‌ ತರಗತಿ ಮುಗಿಸಿ ನೆರಿಯದಲ್ಲಿನ ತಮ್ಮ ಮನೆಗೆ ಹೋಗಿ ಬರುತ್ತೇನೆಂದು ಹೇಳಿದ್ದ ಯುವತಿಯು ನಂತರ ನಾಪತ್ತೆಯಾಗಿದ್ದಳು.ಹುಡುಕಾಟ ನಡೆಸಿದ ಕುಟುಂಬ ಸದಸ್ಯರು ಫೆಬ್ರವರಿ 23 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಫೆಬ್ರವರಿ 22 ರಂದು ಸಂಜೆ ಮನೆಗೆ ಹೊರಟಿದ್ದ ಯುವತಿಯನ್ನು ಅವರ ಅಕ್ಕ ಸುಮಂಗಳ ಎಂಬವರು ತಾನು ಪ್ರಯಾಣಿಸುತ್ತಿದ್ದ ಜೀಪಿನಲ್ಲಿ ಹತ್ತಿಸಿ ಮನೆಯ ಬಳಿ ಇಳಿಸಿ ಹೋಗಿದ್ದರಾದರೂ ಯುವತಿಯು ಮನೆಗೆ ಹೋಗಿರಲಿಲ್ಲ.

ನಾಪತ್ತೆಯಾಗಿ 9 ದಿನಗಳ ನಂತರ ಅವರ ಮನೆಯ ಸಮೀಪದ ಕೋಲೋಡಿ ಕಾಡಿನಲ್ಲಿ ಯುವತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬ್ಯಾಗ್‌ನಲ್ಲಿ ಅಡಿಕೆ ಮರಕ್ಕೆಸಿಂಪಡಿಸುವ ಮೈಲುತುತ್ತು ಪತ್ತೆಯಾಗಿದೆ ಎನ್ನಲಾಗಿದೆ