ಬೆಳ್ತಂಗಡಿ: ಜ.23ರಂದು ದಲಿತ ಸಂಘಟನೆಗಳು ‘ಧರ್ಮಸ್ಥಳ ಪೊಲೀಸ್ ಠಾಣೆ ಚಲೋ’ ಬೃಹತ್ ಮೆರವಣಿಗೆಯನ್ನು ಹಮ್ಮಿಕೊಂಡಿದೆ.
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಸಮೀಪ ಶಿಬಾಜೆ ಗ್ರಾಮದಲ್ಲಿ ಇತ್ತೀಚೆಗೆ ನಡೆದ ದಲಿತ ಯುವಕನ ಕೊಲೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಒತ್ತಾಯಿಸಿ ನಡೆಸುವ ‘ಧರ್ಮಸ್ಥಳ ಪೊಲೀಸ್ ಠಾಣೆ ಚಲೋ’ ಮೆರವಣಿಗೆಯ ಬಿತ್ತಿ ಪತ್ರವನ್ನು ಇಂದು(ಜ.16) ದಲಿತ ಸಂಘಟನೆಗಳು ಬಿಡುಗಡೆಗೊಳಿಸಿದೆ.
ದಲಿತ ಯುವಕನ ಕೊಲೆಯನ್ನು ಖಂಡಿಸಿ ಮತ್ತು ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಿ ಹಾಗೂ ಪ್ರಕರಣದ ಹಿಂದಿನ ಪ್ರಮುಖ ಸೂತ್ರದಾರಿ ಶಿಬಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ರತೀಶ್ ಗೌಡನ ಬಂಧನವನ್ನು ಆಗ್ರಹಿಸಿ ಇದೇ ತಿಂಗಳ ಜನವರಿ 23 ತಾರೀಕಿನಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಾಲೂಕು ಶಾಖೆ ಬೆಳ್ತಂಗಡಿ ಮತ್ತು ಜಿಲ್ಲೆಯ ಸಮಸ್ತ ದಲಿತ ಸಂಘಟನೆಗಳ ನೇತೃತ್ವದಲ್ಲಿ ಧರ್ಮಸ್ಥಳ ಗ್ರಾಮದ ನೇತ್ರಾವತಿಯಿಂದ ಬೃಹತ್ ಮೆರವಣಿಗೆ ಹೊರಟು ಧರ್ಮಸ್ಥಳ ಪೊಲೀಸ್ ಠಾಣೆ ಮುಂಭಾಗದಲ್ಲಿ ಸಮಾಪ್ತಿಗೊಳ್ಳಲಿದೆ.
ಪ್ರತಿಭಟನೆಯ ಪ್ರಚಾರರ್ಥವಾಗಿ ಇಂದು(ಜ.16) ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಾಲೂಕು ಶಾಖೆ ಬೆಳ್ತಂಗಡಿ ಕಚೇರಿಯಲ್ಲಿ ಜಿಲ್ಲೆಯ ಸಮಸ್ತ ದಲಿತ ಸಂಘಟನೆಗಳ ಮುಖಂಡರ ಜಂಟಿ ಸಮಾಲೋಚನ ಸಭೆಯು ನಡೆಯಿತು.
ಸಭೆಯಲ್ಲಿ ದಲಿತ ಸಂಘಟನೆಯ ನಾಯಕರಗಳಾದ ನೇಮಿರಾಜ್ ಕಿಲ್ಲೂರು,ಶೇಖರ್ ಕುಕ್ಕೇಡಿ, ನಾಗರಾಜ್ ಎಸ್ ಲ್ಯಾಲ, ದಯಾನಂದ ಕೊಯ್ಯುರು, ವಾರಿಜಾ ಮಚ್ಚಿನ ಪಿಕೆ, ಶೇಖರ್ ಸುಂದರ ಮೇರಾ, ಅಶೋಕ್ ಕೊಂಚಾಡಿ, ದಿನೇಶ್ ಮೂಳೂರು, ಪ್ರೇಮ್ ಬಳ್ಳಾಲ್ ಭಾಗ್, ಸದಾನಂದ ಅಳದಂಗಡಿ ಇನ್ನಿತರರು ಉಪಸ್ಥಿತರಿದ್ದರು.