Home ಕರಾವಳಿ ಧರ್ಮಸ್ಥಳದಲ್ಲಿ ಬಜರಂಗದಳ ಮುಖಂಡನಿಂದ ದಲಿತನ ಕೊಲೆ । ಕೇಸು ದಾಖಲು

ಧರ್ಮಸ್ಥಳದಲ್ಲಿ ಬಜರಂಗದಳ ಮುಖಂಡನಿಂದ ದಲಿತನ ಕೊಲೆ । ಕೇಸು ದಾಖಲು

ಬೆಳ್ತಂಗಡಿ: ಧರ್ಮಸ್ಥಳ ಸಮೀಪದ ಕನ್ಯಾಡಿ ಗ್ರಾಮದ ಪರಿಶಿಷ್ಟ ಜಾತಿಯ ದಿನೇಶ್ ಎಂಬ ದಲಿತ ಯುವಕನನ್ನು ಸ್ವ-ಗ್ರಾಮದ ಕೃಷ್ಣ ಎಂಬ ಬಜರಂಗದಳದ ಮುಖಂಡನೊಬ್ಬ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೊಲೆ ನಡೆಸಿದ್ದಾನೆ. ಘಟನೆಯ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.

ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಈ ಘಟನೆ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸದ್ಯ ಈ ವೀಡಿಯೋದಲ್ಲಿ ದಿನೇಶ್ ಎಂಬಾತನನ್ನು ಬಜರಂಗದಳದ ಮುಖಂಡ ಕೃಷ್ಣ ಎಳೆದು ಹಾಕಿ ಹಲ್ಲೆ ನಡೆಸುತ್ತಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕೃಷ್ಣ ಎಂಬಾತನ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ವೆನ್ಲಾಕ್ ಗೆ ದಾಖಲಾಗಿದ್ದ ದಿನೇಶ್, ಫೆಬ್ರವರಿ 25 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಘಟನೆಯ ಕುರಿತು ಮೃತನ ತಾಯಿ ಪದ್ಮಾವತಿ ಅವರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರಿನನ್ವಯ ಪೊಲೀಸರು ದಲಿತ ದೌರ್ಜನ್ಯ ತಡೆ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 302 ಸೇರಿದಂತೆ ವಿವಿಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ವಿಚಾರಣೆ ಮುಂದುವರಿದಿದ್ದು, ಆರೋಪಿಯನ್ನು ಬಂಧಿಸಲಾಗಿಲ್ಲ ಎಂದು ಹೇಳಲಾಗಿದೆ.

ದಲಿತನ ಯುವಕ ದಿನೇಶ್ ಎಂಬಾತನನ್ನು ಕೊಲೆ ನಡೆಸಿದ ಪ್ರಕರಣದ ಆರೋಪಿ ಕೃಷ್ಣ ಎಂಬಾತ ಸ್ಥಳೀಯ ಬಜರಂಗದಳದ ಮುಖಂಡನಾಗಿದ್ದು, ಜಿಲ್ಲಾ ಸಂಚಾಲಕನ ಸಹೋದರ ಎಂದು ಹೇಳಲಾಗಿದೆ.

Join Whatsapp
Exit mobile version