Home ಟಾಪ್ ಸುದ್ದಿಗಳು ಮಾಧ್ಯಮದವರೇ ಟಿಕೆಟ್ ಕೊಡಿಸಿ ಚುನಾವಣೆಗೆ ನಿಲ್ಲಿಸಿ ಬಿಟ್ಟಿದ್ದೀರಿ: ನಟ ಧನಂಜಯ್

ಮಾಧ್ಯಮದವರೇ ಟಿಕೆಟ್ ಕೊಡಿಸಿ ಚುನಾವಣೆಗೆ ನಿಲ್ಲಿಸಿ ಬಿಟ್ಟಿದ್ದೀರಿ: ನಟ ಧನಂಜಯ್

ಮಂಡ್ಯ: ಹೈದರಾಬಾದ್ ಗೆ ಹೋಗಿ ಅಲ್ಲಿಂದ ಬರುವಷ್ಟರಲ್ಲಿ ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಉಹಾಪೋಹ ಎದ್ದಿದೆ. ಇದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ನಟ ಡಾಲಿ ಧನಂಜಯ್ ಹೇಳಿದ್ದಾರೆ.


ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಅವರು, ಈಗ ನಾನು ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಸಿನಿಮಾದಲ್ಲಿ ಜನರಿಂದ ಸಿಕ್ಕಿರುವ ಪ್ರೀತಿ ದೊಡ್ಡದು. ಯಾವುದೇ ಕ್ಷೇತ್ರಕ್ಕೆ ಹೋದ್ರೂ ಅಲ್ಲಿ ಅದ್ಭುತವಾಗಿ ಕೆಲಸ ಮಾಡಬೇಕು. ನಾನು ಸಿನಿಮಾ ಮಾಡ್ತಿನಿ. ತುಂಬಾ ಕನಸು ಕಟ್ಟಿಕೊಂಡು ಈ ಕ್ಷೇತ್ರಕ್ಕೆ ಬಂದಿದ್ದೀನಿ. ಇಲ್ಲಿದ್ದುಕೊಂಡೆ ಕೆಲಸ ಮಾಡಬಹುದು. ಚುನಾವಣೆ ಸ್ಪರ್ಧೆ ವಿಚಾರವಾಗಿ ಯಾವುದೇ ಚರ್ಚೆ ನಡೆದಿಲ್ಲ ಎಂದರು.


ಮಾಧ್ಯಮದವರೇ ಟಿಕೆಟ್ ಕೊಡಿಸಿ ಚುನಾವಣೆಗೂ ನಿಲ್ಲಿಸಿಬಿಟ್ಟಿದ್ದೀರಿ. ಲಿಡ್ಕರ್ ಬ್ರಾಂಡ್ ಗೆ ರಾಯಭಾರಿಯಾಗಿದ್ದು ನನಗೆ ಖುಷಿ ಇದೆ. ಅದು ಹಲವು ಬಡ ಜನರ ಬದುಕಿಗೆ ಸಂಬಂಧಿಸಿದೆ ಎಂದರು.

Join Whatsapp
Exit mobile version