Home ಟಾಪ್ ಸುದ್ದಿಗಳು ‘ಡಾ. ರಾಜ್ ಕುಮಾರ್ ಪಠ್ಯ’ ವಾಪಸ್ ಪಡೆದ ದೊಡ್ಡ ಹುಲ್ಲೂರು ರುಕ್ಕೋಜಿರಾವ್

‘ಡಾ. ರಾಜ್ ಕುಮಾರ್ ಪಠ್ಯ’ ವಾಪಸ್ ಪಡೆದ ದೊಡ್ಡ ಹುಲ್ಲೂರು ರುಕ್ಕೋಜಿರಾವ್

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ವಿವಾದ ತಾರಕಕ್ಕೇರುತ್ತಿದ್ದು, ಕನ್ನಡ ನಟ ಡಾ. ರಾಜ ಕುಮಾರ್ ಬಗ್ಗೆ ಬರೆದಿದ್ದ ಬರಹವನ್ನು ಲೇಖಕ ದೊಡ್ಡ ಹುಲ್ಲೂರು ರುಕ್ಕೋಜಿರಾವ್ ಪಠ್ಯದಿಂದ ವಾಪಸ್ ಪಡೆದಿದ್ದಾರೆ.

ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಗೆ ಪತ್ರ ಬರೆದ ಅವರು, ವರನಟ ಡಾ.ರಾಜ್ ಕುಮಾರ್ ಬಗೆಗಿನ ಲೇಖನವನ್ನು ಆರನೇ ತರಗತಿಯ ಪಠ್ಯದಲ್ಲಿ ಸೇರಿಸಲು ನೀಡಿದ್ದ ಒಪ್ಪಿಗೆಯನ್ನು ಹಿಂಪಡೆದಿದ್ದೇನೆ. ಕನ್ನಡ ದ್ರೋಹದ ಮಾತನಾಡಿರುವ ವ್ಯಕ್ತಿಯ ಮರು ಪರಿಷ್ಕರಣೆ ಪಠ್ಯದಲ್ಲಿ ಬಳಸಲು ನಾನು ಒಪ್ಪುವುದಿಲ್ಲ’ ಎಂದು ಹೇಳಿದ್ದಾರೆ.

ನಾನು ಡಾ. ರಾಜಕುಮಾರ್ ಅವರ ಬಗ್ಗೆ ಬರೆದ ಲೇಖನವನ್ನು ಪ್ರೋ. ಬರಗೂರು ರಾಮಚಂದ್ರಪ್ಪನವರ ನೇತೃತ್ವದ ಪಠ್ಯ ಪರಿಷ್ಕರಣೆ ಸಂದರ್ಭದಲ್ಲಿ 6 ನೇ ತರಗತಿಯ ಪ್ರಥಮ ಭಾಷೆ ಕನ್ನಡ ಪುಸ್ತಕಕ್ಕೆ ಸೇರಿಸಲು ಒಪ್ಪಿಗೆ ನೀಡಿದ್ದೆ. ಈಗ ರೋಹಿತ್ ಚಕ್ರತೀರ್ಥ ಎಂಬುವವರ ಅಧ್ಯಕ್ಷತೆಯಲ್ಲಿ ನಡೆದ ಮರುಪರಿಷ್ಕರಣೆ ಬಗ್ಗೆ ದೊಡ್ಡ ವಿವಾದ ಎದ್ದಿದೆ ಎಂದು ತಿಳಿಸಿದ್ದಾರೆ.

Join Whatsapp
Exit mobile version