Home ಕರಾವಳಿ ಪರಿಸರ ಕೆಡಿಸಿ ನಡೆಸುವ ಅಭಿವೃದ್ಧಿಗಿಂತ, ಪರಿಸರ ಕಾಳಜಿಯೊಂದಿಗಿನ ಅಭಿವೃದ್ಧಿ ಅವಶ್ಯಕತೆಯಿದೆ | ಐವನ್ ಡಿಸೋಜಾ

ಪರಿಸರ ಕೆಡಿಸಿ ನಡೆಸುವ ಅಭಿವೃದ್ಧಿಗಿಂತ, ಪರಿಸರ ಕಾಳಜಿಯೊಂದಿಗಿನ ಅಭಿವೃದ್ಧಿ ಅವಶ್ಯಕತೆಯಿದೆ | ಐವನ್ ಡಿಸೋಜಾ

ಮಂಗಳೂರು: ಮೂಡುಬಿದಿರೆ ತಾಲೂಕಿನ ನಿಡ್ಡೋಡಿ ಪ್ರದೇಶದಲ್ಲಿ ಸೀಫುಡ್ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರವು ರೈತರ ಕಾಳಜಿಯನ್ನು ಮರೆತು ವರ್ತಿಸುತ್ತಿದೆ. ಪರಿಸರದ ಮೇಲೆ ದಾಳಿ ನಡೆಸಿ ಅಭಿವೃದ್ಧಿ ನಡೆಸುವ ಬದಲು, ಪರಿಸರಕ್ಕೆ ಪೂರಕ ಅಭಿವೃದ್ಧಿ ನಡೆಸಬೇಕು ಎಂದು ವಿಧಾನಪರಿಷತ್ ಮಾಜಿ ಸದಸ್ಯ ಐವಾನ್ ಡಿಸೋಜ ಆಗ್ರಹಿಸಿದ್ದಾರೆ.

ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪರಿಸರದ ಮೇಲೆ ದಾಳಿ ನಡೆಸಿ ಅದನ್ನು ಕೆಡಿಸಿ ನಡೆಸುವ ಅಭಿವೃದ್ಧಿಗಿಂತ ಪರಿಸರದ ಕಾಳಜಿಯೊಂದಿಗೆ ನಡೆಯಬೇಕಾದ ಅಭಿವೃದ್ಧಿಯ ಅವಶ್ಯಕತೆಯಿದೆ ಎಂದು ಹೇಳಿದರು. ನಿಡ್ಡೋಡಿಯಲ್ಲಿ ಸೀಫುಡ್ ಕಾರ್ಖಾನೆಯನ್ನು ಕೈಬಿಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಿದ್ದು, ಉಸ್ತುವಾರಿ ಸಚಿವರಿಗೆ ಈ ಬಗ್ಗೆ ಒತ್ತಾಯಿಸುತ್ತೇನೆ ಎಂದು ಐವಾನ್ ಡಿಸೋಜಾ ಮಾಹಿತಿ ನೀಡಿದರು.

ತಾಲೂಕಾಗಿ ಮೇಲ್ದರ್ಜೆಗೇರಿರುವ ಮೂಡುಬಿದಿರೆಯಲ್ಲಿ ಸರ್ಕಾರಿ ಬಸ್ ಸೌಲಭ್ಯ, ಸರ್ಕಾರಿ ಪದವಿ, ಪದವಿಪೂರ್ವ ಕಾಲೇಜು, ತಾಲೂಕು ಕಚೇರಿಯ ನಿರ್ಮಾಣದಂತಹ ವ್ಯವಸ್ಥೆಗಳು ನೆನೆಗುದಿಗೆ ಬಿದ್ದಿದೆ. ಕೊರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಪ್ರಯತ್ನ ಕೂಡ ನಡೆಯದಿರುವುದು ಖೇದಕರ ಎಂದು ಐವಾನ್ ಡಿಸೋಜ ಹೇಳಿದರು.

Join Whatsapp
Exit mobile version