ಮೈಸೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳುವ ಮೂಲಕ ಚಮಚಾಗಿರಿ ಮಾಡುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ವಿಶ್ವನಾಥ್, ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಅವರಿಗಿಂತಲೂ ಮೋದಿ ಸಾಧನೆ ಮಾಡಿದ್ದಾರಾ? ಮೋದಿಯನ್ನು ಹೊಗಳಲು ಏನಿದೆ ಎಂದು ಕೇಳಿದ್ದಾರೆ.
ನೆಹರೂ, ಇಂದಿರಾ ಗಾಂಧಿ ಬಡತನ ನಿರ್ಮೂಲನೆ ಮಾಡಿ ದೇಶವನ್ನು ಅಭಿವೃದ್ಧಿ ಪಥದತ್ತ ತಂದಿದ್ದರು. ಆದರೆ, ದೇವೇಗೌಡರು ಮೋದಿಯನ್ನು ಕೊಂಡಾಡುತ್ತಿರುವುದು ವಿಪರ್ಯಾಸ. ಅವರಂತಹ ಹಿರಿಯ ನಾಯಕರಿಂದ ಇದನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಈ ಇಳಿವಯಸ್ಸಿನಲ್ಲಿ ಜಾತ್ಯತೀತ ಪದಕ್ಕೂ ಅವರು ತಿಲಾಂಜಲಿ ಇಟ್ಟಿದ್ದಾರೆ. ಮೋದಿಯಂತಹ ನಾಯಕನನ್ನು ಕಂಡಿರಲಿಲ್ಲ ಎಂದು ದೇವೇಗವಡರು ಹೇಳಿರುವುದು ಚಮಚಾಗಿರಿಯಲ್ಲದೇ ಬೇರೇನೂ ಅಲ್ಲ ಎಂದು ಹೆಚ್. ವಿಶ್ವನಾಥ್ ಹೇಳಿದರು.