ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಹತಾಶ ಪ್ರಯತ್ನ: ಪತ್ರಕರ್ತ ಝುಬೈರ್ ಬಂಧನದ ಕುರಿತು ಸಿದ್ದರಾಮಯ್ಯ

Prasthutha|

ಬೆಂಗಳೂರು: ಪತ್ರಕರ್ತ ಮುಹಮ್ಮದ್ ಝುಬೈರ್ ಬಂಧನಕ್ಕೆ ದೇಶಾದ್ಯಂತ ಆಕ್ರೋಶಗಳು ಹೆಚ್ಚಾಗುತ್ತಿದ್ದಂತೆಯೇ ನರೇಂದ್ರ ಮೋದಿ ಸರಕಾರದ ವಿರುದ್ಧ ರಾಜ್ಯ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ಝುಬೈರ್’ಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿರುವ ಸಿದ್ದು, ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಹತಾಶ ಪ್ರಯತ್ನ ಎಂದು ವಾಗ್ದಾಳಿ ನಡೆಸಿದ್ದಾರೆ.

- Advertisement -

ಆಲ್ಟ್ ನ್ಯೂಸ್ ಸ್ಥಾಪಕರಲ್ಲೊಬ್ಬರಾದ ಪತ್ರಕರ್ತ ಮುಹಮ್ಮದ್ ಝುಬೈರ್ ಬಂಧನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಹತಾಶ ಪ್ರಯತ್ನವಾಗಿದೆ. ಅಘೋಷಿತ ತುರ್ತುಪರಿಸ್ಥಿತಿ ಹೇರಲು ಹೊರಟಿರುವ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಹೋರಾಡಲು ಪ್ರಜಾಪ್ರಭುತ್ವ ಪ್ರೇಮಿಗಳೆಲ್ಲರೂ ಒಟ್ಟಾಗಬೇಕಾಗಿದೆ ಎಂದು #istandwithzubair ಹ್ಯಾಷ್ಟ್ಯಾಗ್ ಉಪಯೋಗಿಸಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಕಳೆದ ಸೋಮವಾರ ದೆಹಲಿ ಪೊಲೀಸರು ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ, ಪತ್ರಕರ್ತ ಮುಹಮ್ಮದ್ ಝುಬೈರ್ ರವರನ್ನು ವಿಚಾರಣೆಗೆಂದು ಕರೆದು ಬೇರೊಂದು ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿದ್ದರು. ಝುಬೈರ್ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪವನ್ನು ಹೊರಿಸಿರುವ ಪೊಲೀಸರು ಇಂದು ಕೋರ್ಟ್’ಗೆ ಹಾಜರುಪಡಿಸಲಿದ್ದಾರೆ.

- Advertisement -

ಪತ್ರಕರ್ತ ಝುಬೈರ್ ಬಂಧನಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಂಸದೆ ಮಹುವಾ ಮೊಯಿತ್ರಾ, ಅಸಾದುದ್ದೀನ್ ಉವೈಸಿ ಸೇರಿದಂತೆ ಅನೇಕ ಗಣ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇದೀಗಾಗಲೇ ಐದು ಲಕ್ಷಕ್ಕೂ ಅಧಿಕ #istandwithzubair ಹ್ಯಾಷ್ ಟ್ಯಾಗ್ ಉಪಯೋಗಿಸಿ ಟ್ವೀಟ್ ಮಾಡಲಾಗಿದೆ.



Join Whatsapp