ಗಂಗಾವತಿ : ಗಂಗಾವತಿ ತಾಲೂಕಿನ ಚಿಕ್ಕಜಂತಕಲ್ ಪಂಚಾಯಿತಿಯ ವಿನೋಭಾ ನಗರದಲ್ಲಿ ಒಂದೇ ಕೋಮಿನ 9 ಜನರ ಮೇಲೆ ಮತ್ತೊಂದು ಗುಂಪಿನ ಯುವಕರು ಮಾರಕಾಯುಧಗಳಿಂದ ಹಲ್ಲೆ ಮಾಡಿದ್ದಾರೆ. ಈ ಪೈಕಿ ಒಬ್ಬ ಮಹಿಳೆ ಸೇರಿ, ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ದಲಿತ ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ರಾಮನ ಬಗ್ಗೆ ಬರೆದ ವಿಷ್ಲೇಷಣಾತ್ಮಕ ಬರಹವನ್ನು ಇನ್ನೊಂದು ಕೋಮಿನ ವ್ಯಕ್ತಿಯೊಬ್ಬ ಸಾಮಾಜಿಕ ತಾಣದಲ್ಲಿ ಹಂಚಿದ್ದನ್ನು ಪ್ರಶ್ನಿಸಿ ಗುಂಪೊಂದು ಹಲ್ಲೆ ನಡೆಸಿದೆ. ನಂತರ ಘಟನೆ ಇತ್ಯರ್ಥವಾಗಿದ್ದರೂ ರಾಜಿ ಪಂಚಾಯತಿ ನೆಪದಲ್ಲಿ ಕರೆಸಿಕೊಂಡು ಮತ್ತೊಮ್ಮೆ ಗಂಭೀರ ಹಲ್ಲೆ ನಡೆಸಲಾಗಿದೆ ಎಂದು ಹಲ್ಲೆಗೊಳಗಾದವರು ಆರೋಪಿಸಿದ್ದಾರೆ.
ಈ ಪೈಕಿ ಒಬ್ಬ ಮಹಿಳೆ ಸೇರಿ, ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಸದ್ಯ ಗಾಯಾಳುಗಳನ್ನು ಗಂಗಾವತಿ ಉಪವಿಭಾಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಗಂಗಾವತಿ ಗ್ರಾಮೀಣ ಪೊಲೀಸರು ಎರಡು ಗುಂಪಿನ ಜನರನ್ನು ಕರೆಯಿಸಿ ವಿಚಾರಣೆ ಕೈಗೊಂಡಿದ್ದಾರೆ.