ಮಿನಿಯಾಪೊಲಿಸ್: ಅಮೆರಿಕದಲ್ಲಿ ಭಾರೀ ಜನಾಂದೋಲನವನ್ನೇ ಸೃಷ್ಠಿಸಿದ್ದ ಜಾರ್ಜ್ ಫ್ಲಾಯ್ಡ್ ಕೊಲೆ ಪ್ರಕರಣದಲ್ಲಿ ಮಾಜಿ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ ಗೆ 22.5 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.
45 ವರ್ಷದ ಡೆರೆಕ್ ಚೌವಿನ್ ಅವರು ಮಿನ್ನಿಯಾಪೊಲಿಸ್ ಕೋರ್ಟ್ ನಲ್ಲಿ ಜಾರ್ಜ್ ಫ್ಲಾಯ್ಡ್ ಕುಟುಂಬಿಕರ ಬಳಿ ಕ್ಷಮೆಯಾಚಿಸದೆ ಸಂತಾಪ ಸೂಚಿಸಿದ್ದು, ನಂತರ ನ್ಯಾಯಾಧೀಶ ಪೀಟರ್ ಕಾಹಿಲ್ ಅವರು ಡೆರೆಕ್ ಗೆ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದರು.
ಫ್ಲಾಯ್ಡ್ ಕುಟುಂಬದ ವಕೀಲರು ಈ ಶಿಕ್ಷೆಯನ್ನು ಅಮೆರಿಕದಲ್ಲಿ ಜನಾಂಗೀಯ ಸಾಮರಸ್ಯದ ಕಡೆಗೆ “ಐತಿಹಾಸಿಕ” ಹೆಜ್ಜೆ ಎಂದು ಬಣ್ಣಿಸಿದ್ದಾರೆ.