ದೇರಳಕಟ್ಟೆ | ಅದ್ಧೂರಿಯಾಗಿ ಶುಭಾರಂಭಗೊಂಡ ‘ರಿದಾನ್ ಮಂದಿ’ ಫ್ಯಾಮಿಲಿ ರೆಸ್ಟೋರೆಂಟ್

Prasthutha|

ದೇರಳಕಟ್ಟೆ: ಕೈಗೆಟುಕುವ ದರದಲ್ಲಿ ಜನರಿಗೆ ಅತ್ಯುತ್ತಮ ಆಹಾರ ಖಾದ್ಯವನ್ನು ಪೂರೈಸುವ ಸದುದ್ದೇಶದಿಂದ BHSM ಗ್ರೂಪ್ ಆಫ್ ಸಂಸ್ಥೆಯ ವತಿಯಿಂದ ಆರಂಭಿಸಲ್ಪಟ್ಟ ‘ರಿದಾನ್ ಮಂದಿ’ ಫ್ಯಾಮಿಲಿ ರೆಸ್ಟೋರೆಂಟ್ ಇತ್ತೀಚೆಗೆ ದೇರಳಕಟ್ಟೆಯ ಹೃದಯಭಾಗದಲ್ಲಿ ಶುಭಾರಂಭಗೊಂಡಿದೆ.

- Advertisement -

ಜಿಲ್ಲೆಯ ಇತಿಹಾಸದಲ್ಲೇ ಇದೇ ಮೊದಲು ಬಾರಿಗೆ ಯಮನ್ ಮೂಲದ ಚೆಫ್’ನಿಂದ ತಯಾರಿಸಲ್ಪಟ್ಟ ಸ್ವಾದಿಷ್ಟವಾದ ಆಹಾರ ಖಾದ್ಯಗಳನ್ನು ಜನರಿಗೆ ಮಿತ ದರದಲ್ಲಿ ಪೂರೈಸುತ್ತಿರುವುದು ಇಲ್ಲಿನ ವೈಶಿಷ್ಟ್ಯ.

ಬಂಟ್ವಾಳದ ಮೆಲ್ಕಾರ್, ತೊಕ್ಕೊಟ್ಟು ಸಮೀಪದ ಕಲ್ಲಾಪುವಿನ ಬಳಿಕ ಇದೀಗ ದೇರಳಕಟ್ಟೆಯಲ್ಲಿ ತನ್ನ ಮೂರನೇ ಬ್ರಾಂಚ್ ಅನ್ನು ‘ರಿದಾನ್’ ಸಂಸ್ಥೆ ಲೋಕಾರ್ಪಣೆ ಮಾಡಿದೆ. ರುಚಿಯಾದ ಅರೇಬಿಯನ್ ಖಾದ್ಯಗಳು ಇಲ್ಲಿನ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದ್ದು, ಬಹುತೇಕ ಎಲ್ಲಾ ರೀತಿಯ ವೈವಿಧ್ಯಮಯ ಖಾದ್ಯಗಳು ಇಲ್ಲಿ ಲಭ್ಯವಿದೆ. ಸಾರ್ವಜನಿಕರು ಇಲ್ಲಿನ ಅತ್ಯುತ್ತಮ ಆಹಾರದ ರುಚಿಯನ್ನು ಸವಿಯಬೇಕೆಂದು ‘ರಿದಾನ್’ ಸಂಸ್ಥೆ ಮನವಿ ಮಾಡಿದೆ.

Join Whatsapp
Exit mobile version