ಮಂಗಳೂರು: ದಕ್ಷಿಣ ಕನ್ನಡ ಸಾಮಾನ್ಯ ಸ್ಥಿತಿಗೆ ಮರಳುವಾಗ ಅಶಾಂತಿ ಸೃಷ್ಟಿಸಲು ಏನಾದರೂ ಒಂದು ವಿಚಾರವನ್ನು ತಂದು ಹಾಕುತ್ತಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರೇ, ಟಿಪ್ಪುವನ್ನು ಅವಹೇಳನ ಮಾಡಿರುವ ನಾಟಕವನ್ನು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪ್ರದರ್ಶನಮಾಡಲು ಅವಕಾಶ ಕೊಡಬಾರದು. ಸ್ವಾತಂತ್ರ್ಯ ಹೋರಾಟಗಾರ ಟಿಪ್ಪುವಿಗೆ ಅವಮಾನ ಮಾಡಿದ್ರೆ ಸಹಿಸಬೇಕೆಂದಿಲ್ಲ ಎಂದು ಎಸ್’ಡಿಪಿಐ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ದೇಶಪ್ರೇಮಿ ಟಿಪ್ಪು ಸುಲ್ತಾನ್ ವಿರುದ್ಧ ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಬರೆದಿರುವ ಟಿಪ್ಪು ನಿಜ ಕನಸುಗಳು ಎಂಬ ವಿವಾದಿತ ನಾಟಕವನ್ನು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪ್ರದರ್ಶಿಸಲು ಸಿದ್ಧತೆ ನಡೆಯುತ್ತಿದೆ. ಅದನ್ನು ಪ್ರದರ್ಶಿಸದಂತೆ ತಡೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.