Home ಕರಾವಳಿ ಹೈಕೋರ್ಟ್ ನಿಂದ ನ್ಯಾಯ ನಿರಾಕರಣೆ, ಕಾನೂನು ಹೋರಾಟ ಮುಂದುವರಿಕೆ: ಉಡುಪಿ ಸರ್ಕಾರಿ ಕಾಲೇಜು ವಿದ್ಯಾರ್ಥಿನಿಯರು

ಹೈಕೋರ್ಟ್ ನಿಂದ ನ್ಯಾಯ ನಿರಾಕರಣೆ, ಕಾನೂನು ಹೋರಾಟ ಮುಂದುವರಿಕೆ: ಉಡುಪಿ ಸರ್ಕಾರಿ ಕಾಲೇಜು ವಿದ್ಯಾರ್ಥಿನಿಯರು

► ಹಿಜಾಬ್ ಧರಿಸದೆ ತರಗತಿಗೆ ಹೋಗುವುದಿಲ್ಲ

ಉಡುಪಿ: ಹಿಜಾಬ್ ವಿಷಯದಲ್ಲಿ ನ್ಯಾಯಾಲಯದ ಮೇಲೆ ಸಂಪೂರ್ಣ ಭರವಸೆ ಇಟ್ಟಿದ್ದೆವು. ಆದರೆ ಇದೀಗ ನ್ಯಾಯ ನಿರಾಕರಿಸಲಾಗಿದೆ. ಇದರ ವಿರುದ್ಧ ನಮ್ಮ ಕಾನೂನು ಹೋರಾಟ ಮುಂದುವರಿಯಲಿದೆ ಎಂದು ಹಿಜಾಬ್ ಗೆ ಅವಕಾಶ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ ವಿದ್ಯಾರ್ಥಿನಿಯರು ಸ್ಪಷ್ಟಪಡಿಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಹಿಜಾಬ್ ತೆಗೆಯುವುದಿಲ್ಲ, ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ನಾವು ಹಿಜಾಬ್ ಅನ್ನು ತೆಗೆಯದೆ ಪರೀಕ್ಷೆ ಬರೆಯಲು ಸಿದ್ಧರಿದ್ದೇವೆ, ಧಾರ್ಮಿಕ ಆಚರಣೆ ಮಾಡುವುದು ನಮ್ಮ ಹಕ್ಕು ಎಂದು ಪ್ರತಿಪಾದಿಸಿದ್ದಾರೆ.

ನಮಗೆ ಕುರಾನ್ ಮತ್ತು ಶಿಕ್ಷಣ ಎರಡೂ ಮುಖ್ಯ, ಕುರಾನ್ ನಲ್ಲಿ ಹಿಜಾಬ್ ಬಗ್ಗೆ ಉಲ್ಲೇಖವಿದೆ ಎಂದು ಹೇಳಿದ್ದಾರೆ. ಹೈಕೋರ್ಟ್ ಆದೇಶವನ್ನು ಗೌರವಿಸಿಕೊಂಡು ನಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಲಿದ್ದೇವೆ ಎಂದಿದ್ದಾರೆ. ನ್ಯಾಯಾಂಗ ಮೇಲೆ ಭರವಸೆ ಇತ್ತು. ಆದರೆ ಇದೀಗ ನಮ್ಮ ಹಕ್ಕು ನಿರಾಕರಣೆ ಮಾಡಲಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕುರ್ ಆನ್ ನಲ್ಲಿ ಹಿಜಾಬ್ ಧರಿಸುವ ಕುರಿತು ಉಲ್ಲೇಖವಿದೆ. ಹೈಕೋರ್ಟ್ ನಮ್ಮ ಹಕ್ಕನ್ನು ಎತ್ತಿ ಹಿಡಿಯುವ ಭರವಸೆ ಇತ್ತು. ಅದರ ತೀರ್ಪು ನಕಾರಾತ್ಮಕವಾಗಿ ಬಂದಿದೆ. ನಾವು ಹಿಜಾಬ್ ಧರಿಸದೆ ತರಗತಿಗೆ ಹೋಗುವುದಿಲ್ಲ ಎಂದರು. ನಾವು ಹೋರಾಟ ಮುಂದುವರಿಸಿತ್ತೇವೆ. ನಮಗೆ ಹಿಜಾಬ್ ಬೇಕು. ಇದು ನಮ್ಮ ಮೂಲಭೂತ ಹಕ್ಕು ಇದು ಕುರಾನಿನಲ್ಲಿ ಉಲ್ಲೇಖವಿದೆ. ಆದರೆ ಹೈಕೋರ್ಟ್ ಮೂಲಭೂತ ಹಕ್ಕಲ್ಲವೆಂದು ಹೇಳುತ್ತದೆ, ಕುರಾನಿನಲ್ಲಿ ಹೇಳಿದ ನಾವು ಧರಿಸುತ್ತಿದ್ದೇವೆ. ನಮಗೆ ಶಿಕ್ಷಣ ಕೂಡ ಬೇಕು, ಹಿಜಾಬ್ ಕೂಡ ಬೇಕು ಎಂದರು.

Join Whatsapp
Exit mobile version