ಶುಕ್ರವಾರ ಒಂದೇ ದಿನದ ಪರೀಕ್ಷೆಯಲ್ಲಿ 437 ಜನರಲ್ಲಿ ಡೆಂಗ್ಯೂ ಪತ್ತೆ

Prasthutha|

ಬೆಂಗಳೂರು: ಶುಕ್ರವಾರ ಒಂದೇ ದಿನ 2503 ಜನರನ್ನು ಪರೀಕ್ಷೆಗೆ ಒಳಪಡಿಸಿದ್ದು, 437 ಜನರಲ್ಲಿ ಡೆಂಗ್ಯೂ ಕಾಣಿಸಿಕೊಂಡಿದೆ. ಅದಾಗಲೇ 91 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

ಶುಕ್ರವಾರದ ಅಂಕಿ ಅಂಶಗಳ ನಂತರ ರಾಜ್ಯದಲ್ಲಿ ಒಟ್ಟು ಸಕ್ರಿಯ ಡೆಂಗಿ ಕೇಸ್‌ಗಳ ಸಂಖ್ಯೆ 8659ಕ್ಕೇ ಏರಿಕೆ ಆಗಿವೆ.

ಕರ್ನಾಟಕದಲ್ಲಿ ಒಟ್ಟಾರೆ ಈ ವರೆಗೆ 63,741 ಜನರನ್ನು ಡೆಂಗಿ ಪರೀಕ್ಷೆಗೆ ಒಳಪಡಿಸಲಾಗಿದ್ದು, 8659 ಜನರಲ್ಲಿ ಡೆಂಗಿ ಪಾಸಿಟಿವ್‌ ವರದಿ ಬಂದಿದೆ. ಇನ್ನು 388 ಜನರು ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಹಾಮಾರಿ ಈಗಾಗಲೇ 8 ಜನರನ್ನು ಬಲಿ ಪಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಾಮಗೊಂಡ್ಲು ಗ್ರಾಮದ ಯಶಸ್ವಿನಿ (18) ಎಂಬ ಯುವತಿ ಡೆಂಗ್ಯೂ ಜ್ವರಕ್ಕೆ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

- Advertisement -

ಬೆಂಗಳೂರು ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಕರಣ

ಬೆಂಗಳೂರು ವ್ಯಾಪ್ತಿಯಲ್ಲಿ ಹೆಚ್ಚಿನ ಡೆಂಗಿ ಪ್ರಕರಣಗಳು ದಾಖಲಾಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ 526 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 165 ಜನರಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಂಡಿವೆ. ಈ ಮೂಲಕ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಣಿಸಿಕೊಂಡ ಡೆಂಗಿ ಪ್ರಕರಣಗಳ ಸಂಖ್ಯೆ 2628ಕ್ಕೆ ಏರಿಕೆ ಆಗಿದೆ. ಇನ್ನು 132 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರು ನಗರದಲ್ಲಿ ಶುಕ್ರವಾರ 10, ಬೆಂಗಳೂರು ಗ್ರಾಮಂತರದಲ್ಲಿ 5 ಡೆಂಗಿ ಪ್ರಕರಣಗಳು ಪ್ರತ್ಯಕ್ಷವಾಗಿವೆ. ಈ ಮೂಲಕ ನಗರದಲ್ಲಿ 52 ಹಾಗೂ ಗ್ರಾಮಂತರದಲ್ಲಿ 37 ಪ್ರಕರಣ ಸಕ್ರೀಯವಾಗಿವೆ.



Join Whatsapp