ಪ್ರಜಾಪ್ರಭುತ್ವ ದಿನೇ ದಿನೇ ಮತ್ತಷ್ಟು ಗಟ್ಟಿಗೊಳ್ಳುತ್ತಿದೆ: ಗೋವಿಂದ ಕಾರಜೋಳ

Prasthutha|

ಬೆಂಗಳೂರು: ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಚ್ಚಾರಿತ್ರ್ಯ ಮತ್ತು ಅಭಿವೃದ್ಧಿಪರ ಆಡಳಿತಕ್ಕೆ ನೀಡಿದ ಇಂದಿನ ಪಂಚರಾಜ್ಯಗಳು ನೀಡಿದ ಚುನಾವಣಾ ಫಲಿತಾಂಶ ಇದು.  ಅವರ ಹೆಜ್ಜೆಯಲ್ಲಿಯೇ ಹೆಜ್ಜೆ ಹಾಕುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಚ್ಚಾರಿತ್ರ್ಯ ಮತ್ತು ಜನಪರ ಆಡಳಿತಕ್ಕೆ ಅಭೂತಪೂರ್ವ ಐತಿಹಾಸಿಕ ಮನ್ನಣೆಯನ್ನು ಜನತೆ ನೀಡಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ ಕಾರಜೋಳ ಪ್ರತಿಕ್ರಿಯಿಸಿದ್ದಾರೆ.

- Advertisement -

ನಾಲ್ಕು ರಾಜ್ಯಗಳಾದ ಉತ್ತರಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರ ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷ ಜನಸಾಮಾನ್ಯರ, ದೀನ-ದಲಿತರ, ಹಿಂದುಳಿದವರ ಅಭಿವೃದ್ಧಿಗಾಗಿ ಕೈಗೆತ್ತಿಕೊಂಡ ಮತ್ತು ಕೈಗೆತ್ತಿಕೊಂಡಿರುವ ಹಲವಾರು ಕಾರ್ಯಕ್ರಮಗಳಿಗೆ ಜನತೆ ಇದೀಗ ಅನುಮೋದನೆ ನೀಡಿದ್ದಾರೆ.  ಈ ಗೆಲುವಿನಿಂದ ಮತ್ತಷ್ಟು ವಿನಮ್ರವಾಗಿ ಭಾರತೀಯ ಜನತಾ ಪಕ್ಷ ಜನ ಕಲ್ಯಾಣಕ್ಕೆ ಮತ್ತು ದೇಶಸೇವೆಗೆ ಸಮರ್ಪಿಸಿಕೊಳ್ಳಬೇಕಾದದ್ದು ನರೇಂದ್ರ ಮೋದಿಯವರಿಗೆ ಸಲ್ಲಿಸಬಹುದಾದ ಗೌರವ. 

ಗೆದ್ದಿರುವ ಎಲ್ಲಾ ಶಾಸಕರಿಗೂ ಅಭಿನಂದನೆಗಳು.  ಈ ಗೆಲುವನ್ನು ಸಾಕಾರಗೊಳಿಸಲು ಅವಿರತವಾಗಿ ಶ್ರಮಿಸಿದ ಬಿಜೆಪಿ ಕಾರ್ಯಕರ್ತರಿಗೆ ಮತ್ತು ಮತ ಹಾಕಿದ ಮತದಾರರೆಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.  ಪ್ರಜಾಪ್ರಭುತ್ವ ದಿನೇ ದಿನೇ ಮತ್ತಷ್ಟು ಗಟ್ಟಿಗೊಳ್ಳುತ್ತಿದೆ ಎಂದು ಕಾರಜೋಳ ಹೇಳಿದ್ದಾರೆ.



Join Whatsapp