Home ಟಾಪ್ ಸುದ್ದಿಗಳು ‘ಸ್ಟಾರ್ ಪ್ರಚಾರಕ’ರ ಪಟ್ಟಿಯಿಂದ ಕೈಬಿಡಲು ನಿಮಗೆ ಅಧಿಕಾರ ಕೊಟ್ಟವರು ಯಾರು? | ಚುನಾವಣಾ ಆಯೋಗಕ್ಕೆ ಸುಪ್ರೀಂ...

‘ಸ್ಟಾರ್ ಪ್ರಚಾರಕ’ರ ಪಟ್ಟಿಯಿಂದ ಕೈಬಿಡಲು ನಿಮಗೆ ಅಧಿಕಾರ ಕೊಟ್ಟವರು ಯಾರು? | ಚುನಾವಣಾ ಆಯೋಗಕ್ಕೆ ಸುಪ್ರೀಂ ತರಾಟೆ

ನವದೆಹಲಿ : ಮಧ್ಯಪ್ರದೇಶದ ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಕಮಲನಾಥ್ ಅವರನ್ನು ಚುನಾವಣೆಗೆ ಕೇವಲ ಮೂರು ದಿನಗಳಿರುವಾಗ, ಕೊನೆಕ್ಷಣದಲ್ಲಿ ‘ಸ್ಟಾರ್ ಪ್ರಚಾರಕ’ರ ಪಟ್ಟಿಯಿಂದ ಕೈಬಿಟ್ಟ ಬಗ್ಗೆ ಚುನಾವಣಾ ಆಯೋಗವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಚುನಾವಣಾ ಪ್ರಚಾರಕ್ಕೆ ಸ್ಟಾರ್ ಪ್ರಚಾರಕರನ್ನು ನೇಮಿಸುವುದು ಎಲ್ಲಾ ಪಕ್ಷಗಳ ಹಕ್ಕು, ಪಕ್ಷದ ತೀರ್ಮಾನಗಳಲ್ಲಿ ಚುನಾವಣಾ ಆಯೋಗಕ್ಕೆ ಮಧ್ಯಪ್ರವೇಶ ಮಾಡುವ ಹಕ್ಕಿಲ್ಲ ಎಂದು ಸಿಜೆಐ ಎಸ್.ಎಸ್. ಬೋಬ್ಡೆ ನ್ಯಾಯಪೀಠ ತಿಳಿಸಿದೆ.

“ನಾವು ನಿಮ್ಮ ಆದೇಶಕ್ಕೆ ತಡೆ ನೀಡುತ್ತಿದ್ದೇವೆ. ಪಕ್ಷದ ನಾಯಕರ ಅಥವಾ ತಾರಾ ಪ್ರಚಾರಕರ ಪಟ್ಟಿಯಿಂದ ಒಬ್ಬರನ್ನು ಕೈಬಿಡಲು ನಿಮಗೆ ಅಧಿಕಾರ ಯಾರು ಕೊಟ್ಟರು?’’ ಎಂದು ಸಿಜೆಐ ಎಸ್.ಎ. ಬೋಬ್ಡೆ ಪ್ರಶ್ನಿಸಿದ್ದಾರೆ.

ಪದೇಪದೇ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆಂಬ ಕಾರಣಕ್ಕಾಗಿ ಚುನಾವಣಾ ಆಯೋಗ ಕಮಲನಾಥ್ ಅವರನ್ನು ತಾರಾ ಪ್ರಚಾರಕರ ಪಟ್ಟಿಯಿಂದ ಕೈಬಿಟ್ಟಿತ್ತು. ಇದನ್ನು ಪ್ರಶ್ನಿಸಿ ಕಮಲನಾಥ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

Join Whatsapp
Exit mobile version