ದಿಲ್ಲಿ ಗಲಭೆಯಲ್ಲಿ ಕಣ್ಣಿಗೆ ಹಾನಿ: ಎಫ್.ಐ.ಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದ ನ್ಯಾಯಾಲಯ

Prasthutha|

ಹೊಸದಿಲ್ಲಿ: ಫೆಬ್ರವರಿ ತಿಂಗಳಲ್ಲಿ ಈಶಾನ್ಯ ದಿಲ್ಲಿಯಲ್ಲಿ ಮುಸ್ಲಿಮ್ ವಿರೋಧಿ ಗಲಭೆಯ ವೇಳೆ ಗುಂಡೇಟಿನಲ್ಲಿ ವ್ಯಕ್ತಿಯೋರ್ವರ ಕಣ್ಣಿಗೆ ಏಟಾದ ಪ್ರಕರಣದ ಎಫ್.ಐ.ಆರ್ ದಾಖಲಿಸುವಂತೆ ದಿಲ್ಲಿ ಕೋರ್ಟ್ ಸೂಚಿಸಿದೆ.

ಗಲಭೆಯ ವೇಳೆ ನರೇಶ್ ತ್ಯಾಗಿ, ಸುಭಾಶ್ ತ್ಯಾಗಿ, ಉತ್ತಮ್ ತ್ಯಾಗಿ ಮತ್ತು ಸುಶೀಲ್ ನೇತೃತ್ವದ ತಂಡವೊಂದು ತನ್ನ ಮೇಲೆ ದಾಳಿ ನಡೆಸಿತು ಎಂದು ಆರೋಪಿಸಿದ ಮುಹಮ್ಮದ್ ನಾಸೀರ್ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಕರ್ಕರ್ದೂಮ ನ್ಯಾಯಾಲಯ ನಡೆಸಿತು.

- Advertisement -

ಅಕ್ಟೋಬರ್ 21ರಂದು ಈ ಕುರಿತು ಆದೇಶವನ್ನು ನೀಡಿದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರಿಚಾ ಮಣಿಚಂದ, ಆದೇಶ ದೊರೆತ 24 ಗಂಟೆಯೊಳಗಾಗಿ ಪ್ರಕರಣವನ್ನು ದಾಖಲಿಸುವಂತೆ ಭಜನ್ ಪುರ ಪೊಲೀಸ್ ಠಾಣೆಯ ಎಸ್.ಎಚ್.ಒ ಗೆ ಸೂಚನೆ ನೀಡಿದ್ದಾರೆ.

ಆದರೆ ತಟಸ್ಥ ಸಂಸ್ಥೆಯೊಂದು ಪ್ರಕರಣದ ತನಿಖೆ ನಡೆಸಬೇಕೆಂಬ ನಾಸೀರ್ ರ ಕೋರಿಕೆಯನ್ನು ನ್ಯಾಯಾಲಯ ತಿರಸ್ಕರಿಸಿದ್ದು, ಅದು ಮ್ಯಾಜಿಸ್ಟ್ರೇಟ್ ಕೋರ್ಟ್ ನ ವ್ಯಾಪ್ತಿಗೆ ಬರುವುದಿಲ್ಲ ಎಂದಿದೆ.

- Advertisement -